RC-DL: ಜಸ್ಟ್ 200 ರೂ ಗೆ ಸಿಗುತ್ತೆ RC, DL ಸ್ಮಾರ್ಟ್ ಕಾರ್ಡ್- ಪಡೆಯುವುದು ಹೇಗೆ?

RC-DL: ವಾಹನ ಮಾಲೀಕರಿಗೆ ಅಥವಾ ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರವು ತುಂಬಾ ಮುಖ್ಯವಾಗುತ್ತದೆ. ಇದನ್ನು ಆರ್ಟಿಒ ಅಧಿಕೃತವಾಗಿ ವಿತರಣೆ ಮಾಡುತ್ತದೆ. ಇದೀಗ ಡಿಎಲ್ ಮತ್ತು ಆರ್ಸಿ ಸಂಬಂಧಿಸಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಸ್ಮಾರ್ಟ್ ಕಾರ್ಡ್ ವಿತರಿಸಲು ಸಾರಿಗೆ ಇಲಾಖೆಯು ನಿರ್ಧರಿಸಿದೆ.

ಡಿಸೆಂಬರ್ 1ರಿಂದಲೇ ಜಾರಿಯಾಗಿರುವ ಈ ನೂತನ ಸ್ಮಾರ್ಟ್ ಕಾರ್ಡ್ಗಳು ಮುಂದಿನ 5 ವರ್ಷಗಳ ಕಾಲ ಬಳಕೆಯಲ್ಲಿರಲಿದೆ ಎಂದು ಹೇಳಲಾಗಿದೆ. ದೇಶಾದ್ಯಂತ ಒನ್ ನೇಷನ್, ಒನ್ ಕಾರ್ಡ್ ನೇಷನ್ (One Nation, One Card) ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ ಮಾದರಿಗಳನ್ನು ಕಡ್ಡಾಯಗೊಳಿಸಿದ 2019ರ ಮಾರ್ಚ್ 1ರ ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಸ್ಮಾರ್ಟ್ ಕಾರ್ಡ್ ಗೆ ತಗಲುವ ಶುಲ್ಕ:
ಹೊಸ ಡಿಎಲ್-ಆರ್ಸಿ ಸ್ಮಾರ್ಟ್ ಕಾರ್ಡ್ ಹೈಟೆಕ್ ಫೀಚರ್ಸ್ ಹೊಂದಿದ್ದು, ಸಾರಿಗೆ ಇಲಾಖೆ ಒಂದು ಕಾರ್ಡ್ಗೆ 200 ರೂ. ಶುಲ್ಕ ವಿಧಿಸಿದೆ. ಇದರಲ್ಲಿ 135.54 ರೂ. ಸರ್ಕಾರದ ಪಾಲಾದರೆ, ಉಳಿದ 64.46 ಸೇವಾದಾರರಿಗೆ ಸಿಗಲಿದೆ. ಸದ್ಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಕಾರ್ಡ್ ಮುದ್ರಿಸಲಾಗುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ?
Parivahan.gov.in ಅಥವಾ Transport.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ಮೂಲಕ ಹೊಸ ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಇನ್ನು ಹತ್ತಿರದ ಆರ್ಟಿಒ ಆಫೀಸ್ಗೂ ಹೋಗಿ ಫಾರ್ಮ್ ಪಡೆದು ಸಲ್ಲಿಸಬಹುದು
Comments are closed.