Parliament : ತಂಬಾಕು, ಗುಟ್ಕಾ, ಸಿಗರೇಟ್ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ – ಸಂಸತ್ತಿನಲ್ಲಿ ಹೊಸ ಮಸೂದೆ ಮಂಡನೆ!!

Parliament : ತಂಬಾಕು, (Tobacco) ಸಿಗರೇಟ್ (Cigarette), ಪಾನ್ ಮಸಾಲಾ ಪ್ರಿಯರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಈ ಬಗ್ಗೆ ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಜಾರಿಗೊಳಿಸಲು ತಯಾರಿ ನಡೆಸಿದೆ.

ಹೌದು, ಕೇಂದ್ರ ಸರ್ಕಾರವು ಸಿನ್ ಗೂಡ್ಸ್ ಅಥವಾ ಹಾನಿಕಾರಕ ವಸ್ತುಗಳ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಇಂದು ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ, 2025 ಮತ್ತು ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, 2025 ಅನ್ನು ಪರಿಚಯಿಸಲಾಗಿದೆ. ಅಂದರೆ ಇನ್ನು ಮುಂದೆ ನೀವು ಸೇದುವ ಸಿಗರೇಟ್ ಬಾಯಿಗೆ ಹಾಕುವ ಗುಟ್ಕಾ ಎಲ್ಲವೂ ದುಬಾರಿಯಾಗಲಿದೆ.
ಇನ್ಮುಂದೆ ಪಾನ್ ಮಸಾಲಾ ತಯಾರಿಕಾ ಯಂತ್ರಗಳ ಮೇಲೂ ಸೆಸ್ ಬೀಳಲಿದೆ. ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ 2025, ಸಿಗರೇಟ್, ತಂಬಾಕು, ಸಿಗಾರ್, ಹುಕ್ಕಾ, ಜರ್ದಾ ಮತ್ತು ಪರಿಮಳಯುಕ್ತ ತಂಬಾಕಿನ ಮೇಲಿನ ಸೆಸ್ ಬದಲಿಗೆ ಹೊಸ ಅಬಕಾರಿ ಸುಂಕವನ್ನು ಹೇರಲಾಗುತ್ತದೆ.
Comments are closed.