ಬೆಳ್ತಂಗಡಿ: ಅಕಾಲಿಕ ಮಳೆ, ಸಿಡಿಲಿನ ಹೊಡೆತಕ್ಕೆ ಮರ ಛಿದ್ರ

ಬೆಳ್ತಂಗಡಿ: ಚಂಡಮಾರುತದ ಪ್ರಭಾವದಿಂದ ಜಿಲ್ಲೆಯ ವಿವಿದೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದ್ದು, ಅಕಾಲಿಕ ಮಳೆಯಿಂದ ಜನರಿಗೆ ತೊಂದರೆ ಉಂಟಾಗಿದೆ.

ಬೆಳ್ತಂಗಡಿ ತಾಲೂಕಿನ ಹಲವು ಕಡೆ ಮೂಡುಬಿದಿರೆ, ಪುತ್ತೂರು ತಾಲೂಕು ಸೇರಿ ಭರ್ಜರಿ ಮಳೆಯಾಗಿದ್ದು, ಕೃಷಿಕರು ತಮ್ಮ ಬೆಳೆ ರಕ್ಷಣೆ ಮಾಡಲು ಪರದಾಡಿರುವ ಘಟನೆ ನಡೆದಿದೆ. ಮಿಂಚು, ಗುಡುಗಿನ ಮಳೆಯಾಗಿದ್ದು, ವಿವಿಧ ಕಡೆ ಹಾನಿಯಾಗಿದೆ.
ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಮಳೆಯ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು. ಶಾಲೆ ಬಿಡುವ ಸಮಯದಲ್ಲಿಯೇ ಮಳೆ ಬಂದು, ವಿದ್ಯಾರ್ಥಿಗಳು ಒದ್ದೆಯಾಗುತ್ತಲೇ ಮನೆ ಸೇರಿದ ಘಟನೆ ನಡೆದಿದೆ.
ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಜೆ ಎಂಬಲ್ಲೆ ಸಂಜೆ ಸಮಯ 5.30 ರ ಸುಮಾರಿಗೆ ಅಕೇಶಿಯ ಮರಕ್ಕೆ ಸಿಡಿಲು ಬಡಿದು ಮರ ಪುಡಿ ಪುಡಿಯಾಗಿದೆ. ಅಲ್ಲದೇ ಸುತ್ತಮುತ್ತಲ ಸುಮಾರು 50 ಅಡಿ ಮಣ್ಣು ಕಿತ್ತು ಹೋಗಿ ಅಗೆದ ರೀತಿ ಆಗಿದೆ. ಸಂಜೆ ಜೋರಾದ ಶಬ್ದದ ಸಿಡಿಲು ಕೇಳಿದ್ದು, ಸ್ಥಳೀಯರು ಬೆಚ್ಚಿ ಬಿದ್ದ ಘಟನೆ ನಡೆದಿದೆ. ಹತ್ತಿರದಲ್ಲೇ ಶಾಲೆ ಇದ್ದು, ಮಕ್ಕಳು ಮನೆಗೆ ಹೋದ ನಂತರ ಈ ಘಟನೆ ನಡೆದಿರುವುದರಿಂದ ಜನ ಸಂಚಾರ ಇಲ್ಲದೇ ಇರುವುದರಿಂದ ದೊಡ್ಡ ಅಪಾಯ ತಪ್ಪಿದೇ ಎಂದೇ ಹೇಳಬಹುದು.
Comments are closed.