Puttur: ಪುತ್ತೂರಿನಿಂದ ಹೊರಟಿದ್ದ ಮದುವೆ ಬಸ್ಸಿನೊಳಗೆ ಹೆಬ್ಬಾವು ಪತ್ತೆ!

Share the Article

Puttur: ಮದುವೆಗೆಂದು ಹೊರಟಿದ್ದ ಬಸ್ಸಿನೊಳಗೆ ಹೆಬ್ಬಾವು ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ಮೂಡುಬಿದರೆಯ ಜೈನ್ ಪೇಟೆಯಲ್ಲಿ ನಡೆದಿದೆ.

ಮದುವೆ ಬಸ್ ಪುತ್ತೂರಿನಿಂದ ಹೆಬ್ರಿ ಕಡೆ ಹೋಗುತ್ತಿದ್ದು, ಕಾಫಿ ವಿರಾಮಕ್ಕಾಗಿ ಜೈನ್ ಪೇಟೆಯ ಹೋಟೆಲ್ ಬಳಿ ನಿಲ್ಲಿಸಲಾಗಿತ್ತು. ಕಾಫಿ ಕುಡಿಯಲೆಂದು ಪ್ರಯಾಣಿಕರು ಇಳಿದು ಹೋಗಿದ್ದರು. ನಂತರ ಚಾಲಕ ವಾಹನದೊಳಗೆ ಪರಿಶೀಲನೆ ನಡೆಸಿದಾಗ, ಹೆಬ್ಬಾವೊಂದು ಮಲಗಿರುವುದು ಕಂಡುಬಂದಿತು.ತಕ್ಷಣ ಪಡುಕೊಣಾಜೆಯ ಉರಗರಕ್ಷಕ ದಿನೇಶ್ ಅವರನ್ನು ಕರೆಸಲಾಯಿತು. ಅವರು ಸುರಕ್ಷಿತವಾಗಿ ಹಾವನ್ನು ಹಿಡಿದು ಸ್ಥಳಾಂತರಿಸಿದರು ಎನ್ನಲಾಗಿದೆ.

Comments are closed.