AI: ದರ್ಶನ್ ‘ಡೆವಿಲ್’ ಚಿತ್ರ ಪ್ರಚಾರಕ್ಕೆ ರಾಜಕಾರಣಿಗಳ ಸಾತ್? ವಿಡಿಯೋ ವೈರಲ್

Share the Article

AI: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಅವರ ಚೊಚ್ಚಲ ಚಲನಚಿತ್ರವಾದ ‘ಡೆವಿಲ್’ ಪ್ರಚಾರಕ್ಕೆ ಇದೀಗ ರಾಜಕಾರಣಿಗಳು ಸಾತ್. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ದರ್ಶನ್ ಅವರ ಡೆವಿಲ್ ಮುಂದಿನ ವಾರದಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ. ಈ ಚಿತ್ರದ ಪ್ರಚಾರಕ್ಕೆ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಾತ್ ನೀಡಿದ್ದಾರೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಂತ ಇದು ಅಸಲಿ ವಿಡಿಯೋ ಅಲ್ಲ. ಬದಲಿಗೆ AI ಸೃಷ್ಟಿಸಿದ ವಿಡಿಯೋ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ದರ್ಶನ್ ಅವರ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ರಂದು ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳಲು, ಸ್ವಾಗತಿಸಲು ಅಪಾರ ಫ್ಯಾನ್ಸ್ ಸಜ್ಜಾಗಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡುತ್ತಾರೆ. ಅಲ್ಲಿ ಹಣುಗಳನ್ನು ನೀಡಿ ಅವರ ಬಗ್ಗೆ ವಿಚಾರಿಸುತ್ತಾರೆ. ಬಳಿಕ ಡೆವಿಲ್ ಪೋಸ್ಟರ್ ಅನ್ನು ದರ್ಶನ್ ಜೊತೆಗೆ ಸಿಎಂ, ಡಿಸಿಎಂ ಹಿಡಿದುಕೊಂಡು ಪ್ರಚಾರ ನಡೆಸಿದ್ದಾರೆ. ಜೈಲಿನಿಂದಲೇ ಸರ್ಕಾರ ಪ್ರಚಾರವನ್ನು ಬೆಂಬಲಿಸಿದಂತೆ’ ವಿಡಿಯೋದಲ್ಲಿ ತೋರಿಸಲಾಗಿದೆ.

ಬಳಿಕ ವಿಧಾನಸೌಧ ಮುಂಭಾಗ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸಿನಿಮಾದ ಭರ್ಜರಿ ಪ್ರಚಾರ ನಡೆಸಲಾಗಿದೆ. ಇದಕ್ಕೆ ಫ್ಯಾನ್ಸ್ ಜೈಕಾರದ ಘೋಷಣೆಗಳು ಹಾಕುವಂತೆ, ಪೋಸ್ಟರ್ ಹಿಡಿದು ರಾರಾಜಿಸುವಂತೆ ಎಐ ಮೂಲಕ ಚಿತ್ರಕರೀಸಲಾಗಿದೆ. ಇದೆಲ್ಲವೇ ನಿಜವಾದರೆ ಹೇಗೆ? ಎಂಬ ಒಂದು ಕಲ್ಪನೆಯನ್ನು ಅಭಿಮಾನಿಗಳಿಗೆ ವಿಡಿಯೋ ಮೂಲಕ ನೀಡಲಾಗಿದೆ.

View this post on Instagram

A post shared by @karnataka _namdhu_ (@karnataka_namdhu_)

Comments are closed.