Education department: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಎರಡೇ ಪರೀಕ್ಷೆ

Education department : SSLC ಮತ್ತು ಸೆಕೆಂಡ್ PUC ಪರೀಕ್ಷೆಗಳ ಅಂತಿಮ ವೇಳಾಪಟ್ಟಿ (Time table) ಬಿಡುಗಡೆ ಮಾಡಿದ್ದ ಶಿಕ್ಷಣ ಇಲಾಖೆ ಮತ್ತೊಂದು ನಿರ್ಣಯ ಕೈಗೊಂಡಿದೆ.

SSLC ಗೆ ಮೂರು ಪರೀಕ್ಷೆಗಳ ಬದಲಾಗಿ ಎರಡು ಪರೀಕ್ಷೆಗಳು ಮಾತ್ರ ನಡೆಯಲಿದೆ. ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.33ಕ್ಕೆ ಇಳಿಸಿರುವ ಶಿಕ್ಷಣ ಇಲಾಖೆ, ಈಗ ಮತ್ತೊಂದು ಸುಧಾರಣೆ ತರಲಿದೆ.ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿತಗೊಳಿಸಿದ ಬಳಿಕ ಮೂರು ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಚಿಂತಿಸಿರುವ ಶಿಕ್ಷಣ ಇಲಾಖೆ, ಈ ವರ್ಷದಿಂದಲೇ ಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲು ಎರಡು ಮುಂದಾಗಿದೆ. ಉತ್ತೀರ್ಣ ಅಂಕಗಳನ್ನು ಕಡಿತ ಮಾಡಿರುವುದರಿಂದ ಮೊದಲೆರಡು ಪರೀಕ್ಷೆಗಳಲ್ಲೇ ಬಹುತೇಕ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ. ಅಲ್ಲದೆ, ಮೂರನೇ ಪರೀಕ್ಷೆಯಲ್ಲೂ ಅಂಕಗಳಲ್ಲಿ ಅಂತಹ ಸುಧಾರಣೆ ಕಾಣುತ್ತಿಲ್ಲ. ಇದರ ಸಲುವಾಗಿಯೇ ಮೂರನೇ ಪರೀಕ್ಷೆ ಕೈಬಿಡಲು ಇಲಾಖೆ ಬಹುತೇಕ ತೀರ್ಮಾನ ಮಾಡಿದೆ.
Comments are closed.