Mukesh Ambani: ದಿನಕ್ಕೆ 5 ಕೋಟಿ ಖರ್ಚು ಮಾಡಿದ್ರೂ ಅಂಬಾನಿ ಸಂಪತ್ತು ಕರಗಲು ಎಷ್ಟು ವರ್ಷ ಬೇಕು?

Mukesh Ambani : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ 16 ನೇ ಶ್ರೀಮಂತ ವ್ಯಕ್ತಿ ಅಲ್ಲದೆ, ಭಾರತದ ಪ್ರಮುಖ ಕೈಗಾರಿಕೋದ್ಯಮಿ. ಅವರ ಆಸ್ತಿ ವಿಚಾರವಾಗಿ ಆಗಾಗ ಅನೇಕ ವಿಚಾರಗಳು ಚರ್ಚೆಗೆ ಬರುತ್ತವೆ. ಅಂತೆಯೇ ಇದೀಗ ಅಂಬಾನಿಯವರು ದಿನಕ್ಕೆ 5 ಕೋಟಿ ಖರ್ಚು ಮಾಡಿದರು ಕೂಡ ಅವರ ಸಂಪತ್ತು ಕರಗಲು ಎಷ್ಟು ವರ್ಷ ಬೇಕಾಗುತ್ತದೆ ಎಂಬ ಸುದ್ದಿ ಒಂದು ಚರ್ಚೆಯಾಗುತ್ತಿದೆ.

ಮುಖೇಶ್ ಅಂಬಾನಿಯವರ ಪ್ರಸ್ತುತ ನಿವ್ವಳ ಮೌಲ್ಯ ರೂ. 1,01,40,00,00,00,00,000 (₹10.14 ಲಕ್ಷ ಕೋಟಿ). ಅವರು ಪ್ರತಿದಿನ 5 ಕೋಟಿ ರೂ. ಖರ್ಚು ಮಾಡಿದರೆ ಅವರ ಸಂಪೂರ್ಣ ಸಂಪತ್ತು ಖಾಲಿಯಾಗಲು ಖಾಲಿಯಾಗಲು 202,800 ದಿನಗಳು ಬೇಕಾಗುತ್ತದೆ. 202,800 ದಿನಗಳನ್ನು 365 ರಿಂದ ಭಾಗಿಸಿದಾಗ 555 ವರ್ಷಗಳು. ಇಂದಿನಿಂದ ಮುಖೇಶ್ ಅಂಬಾನಿ ಪ್ರತಿದಿನ 5 ಕೋಟಿ ರೂ. ಖರ್ಚು ಮಾಡಿದರೂ, ಅವರ ಖಜಾನೆ ಖಾಲಿಯಾಗಲು ಇನ್ನೂ ಐದು ಶತಮಾನಗಳು ಬೇಕಾಗುತ್ತದೆ. ಇದರರ್ಥ ಅವರ ಭವಿಷ್ಯದ ಅನೇಕ ಪೀಳಿಗೆಗಳು ಯಾವುದೇ ಕೆಲಸ ಮಾಡದೆ ಐಷಾರಾಮಿ ಜೀವನವನ್ನು ನಡೆಸಬಹುದು.
ಇನ್ನೂ ಅವರ ಒಟ್ಟು ಸಂಪತ್ತು $113.5 ಬಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು ರೂ. 10.14 ಲಕ್ಷ ಕೋಟಿ) ಎಂದು ಅಂದಾಜಿಸಲಾಗಿದೆ. ಈ ಮೊತ್ತವು ದೊಡ್ಡದಾಗಿದೆ. ಒಬ್ಬ ಸರಾಸರಿ ವ್ಯಕ್ತಿ ಅದನ್ನು ಲೆಕ್ಕಹಾಕಲು ಪ್ರಾರಂಭಿಸಿದರೆ, ಅದು ಜೀವಿತಾವಧಿಯನ್ನು ತೆಗೆದುಕೊಳ್ಳುತ್ತದೆ.
Comments are closed.