Kerala: ಕೇರಳದ ಚುನಾವಣೆಯಲ್ಲಿ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ !! ಅರೆ.. ಏನಿದು ಆಶ್ಚರ್ಯ?

Kerala : ಕೇರಳದ ಮುನ್ನಾರ್ ನಲ್ಲಿ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಸೋನಿಯಾ ಗಾಂಧಿ ಕಣಕ್ಕಿಳಿಯಲಿದ್ದಾರೆ. ಅರೆ.. ಏನ್ ಆಶ್ಚರ್ಯವಿದು? ಊಹೆಗೂ ನಿಲುಕದ ವಿಚಾರ.. ಎಂದೆಲ್ಲ ಯೋಚನೆ ಮಾಡ್ತಾ ಇದ್ದೀರಾ. ನೀವೊಂದು ಕಂಡಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಬಿಜೆಪಿ ಟಿಕೆಟ್ ನೀಡಿದ್ದಲ್ಲ. ಬದಲಿಗೆ ಸೋನಿಯಾ ಗಾಂಧಿ ಎಂಬ ಹೆಸರಿನ ಮಹಿಳೆಗೆ ಬಿಜೆಪಿ ಟಿಕೆಟ್ ನೀಡಿದೆ.


ಹೌದು, ಕೇರಳದಲ್ಲಿ ಪಂಚಾಯತ್ ಚುನಾವಣೆ ಸಮೀಪಿಸಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಈ ವೇಳೆ ಮುನ್ನಾರ್‌ನ ಮೂಲಕ್ಕಡ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ. ಹಾಗಂತ ಬಿಜೆಪಿ ತಪ್ಪಾಗಿ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟಿರುವುದಲ್ಲ. ಈ ಅಭ್ಯರ್ಥಿ ಹೆಸರು ಸೋನಿಯಾ ಗಾಂಧಿ.
ಇನ್ನೂ ಈ ಹೆಸರಿನಿಂದ ಹಿಂದೆ ದೊಡ್ಡ ಇತಿಹಾಸವೂ ಇದೆ. ಈ ಅಭ್ಯರ್ಥಿಯ ತಂದೆ ಹೆಸರು ದುರೆ ರಾಜ್. ಕಟ್ಟಾ ಕಾಂಗ್ರೆಸ್ ನಾಯಕ. ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕಾಂಗ್ರೆಸ್‌ನ ಕಟ್ಟಾಳುವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿ ಗುರುತಿಸಿಕೊಂಡಿರುವ ದುರೆ ರಾಜ್, ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ಮೇಲಿನ ಅಭಿಮಾನಕ್ಕೆ ತಮಗೆ ಹುಟ್ಟಿದ ಮಗುವಿಗೆ ಸೋನಿಯಾ ಗಾಂಧಿ ಎಂದು ಹೆಸರಿಟ್ಟಿದ್ದರು. ಇದೇ ಸೋನಿಯಾ ಗಾಂಧಿ ಇದೀಗ ಮುನ್ನಾರ್ ಪಂಚಾಯತ್‌ನ ಬಿಜೆಪಿ ಅಭ್ಯರ್ಥಿ.
Comments are closed.