Janvi: ‘ಜನ ಮರುಳೋ ಜಾತ್ರೆ ಮರುಳೋ ‘ – ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದ್ದಕ್ಕೆ ಜಾನ್ವಿ ಆನ್ಸರ್

Janvi: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಿಂದ ಕಳೆದ ವಾರ ಅಂತ್ಯ ಜಾನವಿ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಳಿಕ ಅವರನ್ನು ಮನೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಮನೆಗೆ ಕರೆದುಕೊಳ್ಳಲಾಯಿತು. ನಂತರದಲ್ಲಿ ಅನೇಕ ಮಾಧ್ಯಮಗಳು ಅವರನ್ನು ಸಂದರ್ಶನ ಮಾಡುತ್ತಿವೆ. ಈ ವೇಳೆ ಗಿಲ್ಲಿ ಬಗ್ಗೆ ಕೇಳಿದ್ದಕ್ಕೆ ಜಾನ್ವಿಯವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಹೌದು, ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದಾಗ ಅವರು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿ ಗಿಲ್ಲಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಅವರಿಗೆ ಸಾಕಷ್ಟು ಕ್ರೇಜ್ ಸೃಷ್ಟಿ ಆಗಿದೆ ಎಂಬುದು ಜಾನ್ವಿಗೆ ತಿಳಿದಿತ್ತು ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಹೊರಗಡೆ ಅವರ ಕ್ರೇಜ್ ನೋಡಿ ‘ಜನ ಮರುಳೋ ಜಾತ್ರೆ ಮರುಳೋ’ ಎಂದು ಹೇಳಿದರು. ಅವರು ಹೇಳಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನು ಕೆಲವರು ಟೀಕಿಸಿದ್ದಾರೆ. ‘ಜನರು ಸುಮ್ಮನೆ ಬೆಂಬಲ ನೀಡೋದಿಲ್ಲ’ ಎಂದಿದ್ದಾರೆ. ‘ಗಿಲ್ಲಿ ಕ್ರೇಜ್ ನೋಡಿ ಜಾನ್ವಿಗೆ ಉರಿದಿರಬೇಕು’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ.
Comments are closed.