CM-DCM: ಹನುಮ ಜಯಂತಿಯಂದೇ ನಾಟಿ ಕೋಳಿ ಬ್ರೇಕ್ ಫಾಸ್ಟ್ ಸವಿದ ಸಿಎಂ- ಡಿಸಿಎಂ !! ಕಿಡಿ ಕಾರಿದ ನಾಯಕರು

CM-DCM: ರಾಜ್ಯದಲ್ಲಿ ಮುಖ್ಯಮಂತ್ರಿಯ ಕುರ್ಚಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವೈಮನಸ್ಸು ಉಂಟಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಿರುವ ನಡುವೆಯೇ ಇಂದು ಡಿಕೆ ಶಿವಕುಮಾರ್ ಮನೆಗೆ ಸಿಎಂ ಸಿದ್ದರಾಮಯ್ಯ ತೆರಳಿ ಬ್ರೇಕ್ ಫಾಸ್ಟ್ ಸವಿದಿದ್ದಾರೆ. ಈ ವಿಚಾರ ಆರಂಭದಲ್ಲಿ ಒಳ್ಳೆಯ ಬೆಳವಣಿಗೆ ಎಂದು ಚರ್ಚೆ ಆದರೂ ಕೂಡ ಇದೀಗ ವಿವಾದಕ್ಕೆ ಕಾರಣವಾಗಿದೆ.

ಹೌದು, ಉಪಾಹಾರ ಕೂಟಕ್ಕೆ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯ ಬ್ರೇಕ್ಫಾಸ್ಟ್ಗೆಂದೆ ನಾಟಿಕೋಳಿ ರೆಸಿಪಿಗಳನ್ನ ಡಿಕೆಶಿ ಮಾಡಿಸಿದ್ರು. ಅಲ್ಲೇ ನಿಂತಿದ್ದ ಡಿಕೆ ಸುರೇಶ್ರನ್ನು ಸಿಎಂ ಪಕ್ಕದಲ್ಲೇ ಕೂರಿಸಿಕೊಂಡ್ರು. ಮನೆಗೆ ಬಂದ ಸಿಎಂಗೆ ಡಿಕೆ ಶಿವಕುಮಾರ್ ಊಟ ಬಡಿಸಿದ್ದಾರೆ.
ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಹನುಮ ಜಯಂತಿ (Hanuma Jayanti) ದಿನದಂದೇ ನಾಟಿ ಕೋಳಿ ಸಾರಿನ ಬ್ರೇಕ್ ಫಾಸ್ಟ್ (Breakfast meeting) ಮಾಡಿದ್ದು ಎಷ್ಟು ಸರಿ ಎಂದು ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ (Suresh Kumar) ಪ್ರಶ್ನೆ ಮಾಡಿದ್ದಾರೆ.
Comments are closed.