Jamir Ahmadkhan: ಸೌದಿ ಅರೇಬಿಯಾದಿಂದ ಸಚಿವ ಜಮೀರ್ ಅವರ ಸೋಶಿಯಲ್ ಮೀಡಿಯಾಗಳ ನಿರ್ವಹಣೆ? 

Share the Article

 Jamir Ahmadkhan: ಕರ್ನಾಟಕದ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಅವರ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಸೌದಿ ಅರೇಬಿಯಾದಿಂದ ನಿರ್ವಹಿಸಲಾಗುತ್ತಿದೆ ಎಂದು ಬಿಜೆಪಿ ಸಾಕ್ಷಿ ಸಮೇತ ತೋರಿಸಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. 

ಹೌದು, ಜಮೀರ್‌ ಅವರ ಸಾಮಾಜಿಕ ಜಾಲತಾಣಗಳು ಸೌದಿಯಿಂದ ನಿರ್ವಹಣೆಯಾಗುತ್ತಿರುವುದು ಲೋಕಸತ್ಯ, ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

 ಬಿಜೆಪಿ ಪ್ರಶ್ನಿಸಿದ್ದು ಏನು?

ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಮತ್ತು ಸದಾ ಕಾಲವೂ ಬರೀ ಮುಸಲ್ಮಾನರನ್ನು ಜಪಿಸುವ @BZZameerAhmedK ಅವರ ಸಾಮಾಜಿಕ ಜಾಲತಾಣ ಖಾತೆಗಳು ಸೌದಿ ಅರೇಬಿಯಾದಿಂದ ನಿರ್ವಹಣೆಯಾಗುತ್ತಿದೆ. ಈ ಮೂಲಕ @siddaramaiah ಸರ್ಕಾರದ ಸಚಿವರೊಬ್ಬರು ತಮ್ಮ ಇಲಾಖೆಯ ಖಚಿತ ಮತ್ತು ಅಧಿಕೃತ ಮಾಹಿತಿಗಳನ್ನು ಅನ್ಯ ರಾಷ್ಟ್ರಕ್ಕೆ ರವಾನಿಸುತ್ತಿರುವುದು ಸ್ಪಷ್ಟವಾಗುತ್ತಿದೆ. 

ಜಮೀರ್‌ ಅವರ ಸಾಮಾಜಿಕ ಜಾಲತಾಣಗಳು ಸೌದಿಯಿಂದ ನಿರ್ವಹಣೆಯಾಗುತ್ತಿರುವುದು ಲೋಕಸತ್ಯ, ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಜಮೀರ್‌ ಅವರೇ, ಕರ್ನಾಟಕದ ನಿಮ್ಮದೇ ‘ಬಾಂಧವʼರ ಮೇಲೆ ನಿಮಗೆ ನಂಬಿಕೆ ಇಲ್ಲವೇ ?

Comments are closed.