Udupi : ಜೈಲಿಗೆ ಹೋಗಿ ಬಂದರೂ ಮತ್ತೆ ಯುವತಿಯ ಮೇಲೆ ಅತ್ಯಾಚಾರ – ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಅರೆಸ್ಟ್

Share the Article

Udupi : ಇವತ್ತಿಗೆ ಒಬ್ಬಳನ್ನು ಅಡ್ಡಗಟ್ಟಿ ಬಲವಂತದಿಂದ ಅತ್ಯಾಚಾರ ಕೈದ ಆರೋಪದಡಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನನ್ನು ಉಡುಪಿ ಮಹಿಳಾ ಪೊಲೀಸ್ ಅರೆಸ್ಟ್ ಮಾಡಿದೆ.

ಪೆರ್ಡೂರು ಹಿಂದು ಜಾಗರಣಾ ವೇದಿಕೆಯ ನಾಯರ್‌ಕೋಡು ಘಟಕದ ಪ್ರದೀಪ್ ಪೂಜಾರಿ(26) ಬಂಧಿತ ಆರೋಪಿ. ಈತ ಯುವತಿಯೊಬ್ಬಳನ್ನು ಮದುವೆಯಾಗುವಂತೆ ನಿರಂತರ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಆಕೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆತನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದನು.

 ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದರೂ ಕೂಡ ಆತ ಮತ್ತೆ ಅದೇ ಧ್ವೇಷದಲ್ಲಿ ನ.29ರಂದು ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಆ ಯುವತಿಯನ್ನು ಅಡ್ಡಗಟ್ಟಿ ಮತ್ತೆ ಮದುವೆಯಾಗುವಂತೆ ಪೀಡಿಸಿದನು. ಇದಕ್ಕೆ ಆಕೆ ನಿರಾಕರಿಸಿದಾಗ ಆಕೆಯನ್ನು ಅಲ್ಲೇ ಕತ್ತು ಹಿಸುಕಿ ಬೆದರಿಸಿ ಅತ್ಯಾಚಾರ ಎಸಗಿದನು ಎಂದು ದೂರಲಾಗಿದೆ. 

Comments are closed.