BBK-12 : ಗಿಲ್ಲಿ ನಟನ ಬಗ್ಗೆ ಯಾರಿಗೂ ಗೊತ್ತಿಲ್ಲದ, 6 ತಿಂಗಳ ಹಿಂದೆಯೇ ನಡೆದ ಸೀಕ್ರೆಟ್ ಬಹಿರಂಗಪಡಿಸಿದ ಕಿಚ್ಚ ಸುದೀಪ್!!

Share the Article

BBK-12 : ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಕಾಮಿಡಿ ಅವರ ನೇರ ಮಾತುಗಳು ಆರಂಭದಲ್ಲಿ ಕನ್ನಡಿಗರ ಮನೆಗೆದ್ದಿದ್ದವು. ಇಲ್ಲಿ ನಟ ಎಂದರೆ ಎಲ್ಲರೂ ಅಚ್ಚುಮೆಚ್ಚಿನಿಂದ ಒಪ್ಪಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಗಿಲ್ಲಿ ಓವರ್ ಆಗಿ ಕಾಮಿಡಿ ಮಾಡುತ್ತಿದ್ದಾರೆ, ಅವರ ಮಾತುಗಳಿಂದ ಅನೇಕರಿಗೆ ಹರ್ಟ್ ಆಗುತ್ತಿದೆ, ಅತಿರೇಕದ ವರ್ತನೆ ಎನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

 ಬಿಗ್ ಬಾಸ್ ಮನೆಯಲ್ಲಿ ಇದೀಗ ಬಿಬಿ ಪ್ಯಾಲೇಸ್ ಟಾಸ್ಕ್ ನಡೆಯುತ್ತಿದ್ದು ಮಾಜಿ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಮನೆಯ ಇಲ್ಲದಿಬ್ಬಂದಿಗಳು ಅತಿಥಿಗಳನ್ನು ಉತ್ತಮ ರೀತಿಯಲ್ಲಿ ಸತ್ಕಾರ ಮಾಡುತ್ತಿದ್ದರೆ ಗಿಲ್ಲಿ ನಟ ಮಾತ್ರ ಬೇಕಾಬಿಟ್ಟಿ ಮಾತುಗಳನ್ನು ಆಡಿ ಎಲ್ಲರಿಗೂ ಬೇಸರ ತರಿಸುತಿದ್ದಾರೆ. ಈ ವಿಚಾರವಾಗಿ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ ಅವರು ಕೂಡ ಗಿಲ್ಲಿ ನಟನಿಗೆ ಬುದ್ಧಿ ಮಾತು ಹೇಳಿದ್ದಾರೆ. ಈ ವೇಳೆ ಅವರು ಆರು ತಿಂಗಳ ಹಿಂದೆ ನಡೆದ, ಯಾರಿಗೂ ಗೊತ್ತಿಲ್ಲದ ಗಿಲ್ಲಿ ನಟನ ಕುರಿತಾದ ವಿಚಾರ ಒಂದನ್ನು ಬಹಿರಂಗಪಡಿಸಿದ್ದಾರೆ.

ಯಸ್, ಗಿಲ್ಲಿಗೆ “ಮನಸ್ಸು ಪೂರ್ವಕವಾಗಿ ಮಾತಾಡ್ತೀರಿ, ನಗಸ್ತೀರಿ. ಕಾವ್ಯ ಹೇಳಿದಂತೆ ನಿಮ್ಮನ್ನು ಯಾಕೆ ನಾವು ಕಂಟ್ರೋಲ್‌ ಮಾಡಬೇಕು? ಆರು ತಿಂಗಳ ಹಿಂದೆ ಅಂದರೆ ಫೆಬ್ರವರಿಗೆ ನಿಮ್ಮ ಜೊತೆ ಕಾಂಟ್ರ್ಯಾಕ್ಟ್‌ ಮಾಡಿಕೊಳ್ತಾರೆ. ನೀವು ಒಳ್ಳೆಯ ಸ್ಪರ್ಧಿ ಎಂದು ಮೊದಲೇ ಕಾಂಟ್ರ್ಯಾಕ್ಟ್‌ ಮಾಡಿದ್ದರು” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

“ಬೆಳೆದಿರೋದು ನಾಲಿಗೆಯಿಂದ, ಜನರನ್ನು ನಗಿಸುತ್ತಿರೋದು ನಾಲಿಗೆಯಿಂದಲೇ, ಜನರನ್ನು ಮೆಚ್ಚಿಸಿರೋದು ನಾಲಿಗೆಯಿಂದಲೇ, ಹಾಳಾಗೋದು ನಾಲಿಗೆಯಿಂದಲೇ. ನೀವು ಬಿಗ್‌ ಬಾಸ್‌ ಮನೆಗೆ ಬಂದಾಗ ಮಗು ಆಗ್ತೀರಿ, ನಿಮ್ಮನ್ನು ದಾರಿ ಮುಟ್ಟಿಸೋದು ನಮ್ಮ ಕರ್ತವ್ಯ. ಮಾಡಿದ್ದನ್ನೆಲ್ಲ ಸರಿ ಅಂದರೆ ತಪ್ಪಾಗುತ್ತದೆ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಕಿಚ್ಚ ಸುದೀಪ್ ಏನಂದರು?

ಗಿಲ್ಲಿ ನಟ ಜೊತೆ ಮಾತಾಡುವಾಗ ”ಈ ಸೀಸನ್‌ಗಾಗಿ 6 ತಿಂಗಳ ಹಿಂದೆ ನಿಮ್ಮ ಜೊತೆ ಅಗ್ರೀಮೆಂಟ್ ಆಗಲಿಲ್ವಾ? ಎಲ್ಲರಿಗಿಂತ ಮೊದಲು ನೀವೇ ತಾನೇ ಕಮ್ಮಿಟ್ ಆಗಿದ್ದು ಈ ಶೋಗೆ. ನೀವೇ ಹೇಳಿ ಗಿಲ್ಲಿ ಅವರೇ.. ನಿಮ್ಮ ಜೊತೆ ‘ಬಿಗ್ ಬಾಸ್’ ಮಾತುಕತೆ ಯಾವಾಗ ಆಯ್ತು?” ಎಂದು ಸುದೀಪ್ ಕೇಳಿದರು. ಅದಕ್ಕೆ ”ಏಪ್ರಿಲ್ ಅನ್ಸುತ್ತೆ ಅಣ್ಣ” ಎಂದು ಗಿಲ್ಲಿ ನಟ ಉತ್ತರಿಸಿದರು. ಆಗ, ”ಫೆಬ್ರವರಿ” ಎಂದು ಸುದೀಪ್ ಕರೆಕ್ಟ್ ಮಾಡಿದರು.

”ಫೆಬ್ರವರಿಯಲ್ಲಿ ನಿಮ್ಮ ಜೊತೆ ಮಾತುಕತೆ ಆಗಿದೆ ಅಂದ್ಮೇಲೆ ನಿಮ್ಮನ್ನ ಕಂಟ್ರೋಲ್ ಮಾಡೋದಕ್ಕೆ ಸೈನ್ ಮಾಡಿಸಿಕೊಳ್ತಾರಾ? ಅಥವಾ ‘ಬಿಗ್ ಬಾಸ್‌’ ಶೋಗೆ ಒಳ್ಳೆಯ ಕಂಟೆಸ್ಟೆಂಟ್ ಅಂದುಕೊಂಡು ಸೈನ್ ಮಾಡಿಸಿಕೊಳ್ತಾರಾ?” ಎಂದು ಸುದೀಪ್ ಪ್ರಶ್ನೆ ಮಾಡಿದರು. ಕೊನೆಗೆ, ”ಗಿಲ್ಲಿನ ಕಂಟ್ರೋಲ್ ಮಾಡುವ ಉದ್ದೇಶ ಯಾರಿಗೂ ಇಲ್ಲ” ಎಂದು ಸುದೀಪ್‌ ಸ್ಪಷ್ಟಪಡಿಸಿದರು.

Comments are closed.