BBK-12 : ಬಿಗ್ ಬಾಸ್ ಮನೆಯಿಂದ ಇಂದು ಗಟ್ಟಿಗಿತ್ತಿ ಔಟ್!!

Share the Article

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ನಿನ್ನೆ ನಡೆದ ಕಿಚ್ಚನ ನೇತೃತ್ವದ ವೀಕೆಂಡ್ ಪಂಚಾಯಿತಿಯಲ್ಲಿ ಹಲವರಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ಇಂದು ಎಲಿಮಿನೇಟ್ ತೂಗುಗತ್ತಿಯ ಮೇಲೆ ಸ್ಪರ್ಧಿಗಳು ನಿಂತಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಿಂದ ಇಂದು ಗಟ್ಟಿ ಸ್ಪರ್ಧಿ ಔಟ್ ಆಗಿದ್ದಾರೆ ಎನ್ನಲಾಗಿದೆ.

ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ಈ ವಾರ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಮೂಡುತ್ತಿದೆ. ಈ ಕುತುಹಲದ ನಡುವೆ ಬಿಗ್ ಬಾಸ್ ಮನೆಯಲ್ಲಿ ಗಟ್ಟಿಗಿತ್ತಿ ಎನಿಸಿಕೊಂಡಿದ್ದ ಜಾನ್ಹವಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಕೆಲವು ಮೂಲಗಳು ತಿಳಿಸಿವೆ.

ಬಿಗ್‌ಬಾಸ್ ಇತಿಹಾಸದಲ್ಲಿ ಇಂತಹ ಶಾಕಿಂಗ್ ಎಲಿಮಿನೇಷನ್‌ ಸಾಕಷ್ಟು ಬಾರಿ ನಡೆದಿದೆ. ಬಿಗ್‌ಬಾಸ್ ಸೀಸನ್ 12ರಲ್ಲಿ ಕೂಡ ಕಾಕ್ರೋಚ್ ಸುಧಿ ಬಹಳ ಬೇಗ ಔಟ್ ಆಗಿದ್ದರು. 49 ದಿನಗಳ ಕಾಲ ಸುಧಿ ಮನೆ ಒಳಗೆ ಇದ್ದರು. ಆರಂಭದಿಂದಲೂ ತಮ್ಮ ಡೈಲಾಗ್‌ಗಳ ಮೂಲಕ ಪ್ರಬಲ ಸ್ಪರ್ಧಿ ಎನ್ನುವಂತೆ ಆಡಿದ್ದರು. ಕೆಲ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರಿಂದ ಅಭಿಮಾನಗಳ ಬೆಂಬಲ ಕೂಡ ಇತ್ತು. ಹಾಗಾಗಿ ಅವರು ಫಿನಾಲೆವರೆಗೂ ಉಳಿದುಕೊಳ್ಳುತ್ತಾರೆ ಎಂದೇ ಜನ ಭಾವಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಬೆನ್ನಲ್ಲೇ ಜಾನವಿಯವರು ಕೂಡ ಫೈನಲ್ ಕಂಟೆಸ್ಟೆಂಟ್ ಆಗಿ ಉಳಿದುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಅವರ ಆಟವನ್ನು ಕಂಡು ಇದೀಗ ಜನರು ಅವರನ್ನು ಮನೆಯಿಂದ ಹೊರ ಕಳಿಸಿದ್ದಾರೆ.

Comments are closed.