S T Somshekar: ನಮ್ಮ ಕ್ಷೇತ್ರಕ್ಕೆ ಯಾವುದೇ ಬಾರ್, ರೆಸ್ಟೋರೆಂಟ್ ಬೇಡ – ಹೊಸ ಸಾಹಸಕ್ಕೆ ಮುಂದಾದ ಶಾಸಕ ಸೋಮಶೇಖರ್

S T Somshekar : ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಎಸ್.ಟಿ. ಸೋಮಶೇಖರ್(ST Somahshekhar) ಹೊಸದೊಂದು ಸಾಹಸಕ್ಕೆ ಮುಂದಾಗಿದ್ದು ಯಶವಂತಪುರ ಕ್ಷೇತ್ರದಲ್ಲಿ ಯಾವುದೇ ಬಾರ್ ಮತ್ತು ರೆಸ್ಟೋರೆಂಟ್ ಗೆ ಅನುಮತಿ ನೀಡಬಾರದೆಂದು ಕ್ಷೇತ್ರ ಆರೋಗ್ಯಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ.

ಹೌದು, ತಮ್ಮ ಯಶವಂತಪುರ ಕ್ಷೇತ್ರದಲ್ಲಿ ಹೊಸದಾಗಿ ಯಾವುದೇ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡಬಾರದೆಂದು ಶಾಸಕ ಎಸ್ ಟಿ ಸೋಮಶೇಖರ್ ಅವರು ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಈ ಮನವಿಯು ಹಲವು ಅನುಮಾನಗಳನ್ನೂ ಹುಟ್ಟುಹಾಕಿವೆ.
ಯಸ್, ನವೆಂಬರ್ 29 ರ ಶನಿವಾರದಂದು ಈ ಮನವಿ ಪತ್ರವನ್ನು ಮಾಜಿ ಸಚಿವ ಎಸ್.ಟಿ . ಸೋಮಶೇಖರ್ ನೀಡಿದ್ದಾರೆ. ಇದೇ ರಸ್ತೆಯಲ್ಲಿ ಸುಮಾರು 2 ಕಿಮೀ ಸುತ್ತಳತೆಯಲ್ಲಿ 10 ಕ್ಕೂ ಹೆಚ್ಚು ಬಾರ್ ಗಳಿದ್ದರೂ 2000 ಆಸನಗಳ ವ್ಯವಸ್ಥೆಯುಳ್ಳ ಸುಖ ಪಬ್ ಗೆ ಅನುಮತಿ ನೀಡಲಾಗಿದೆ. ಅದೂ ಸಾಲದೆಂಬಂತೆ ಕಿರುತೆರೆಯ ಬಿಗ್ ಬಾಸ್ ಎಂದೇ ಖ್ಯಾತರಾಗಿರುವ ಪ್ರಸಿದ್ದ ಚಿತ್ರನಟರೊಬ್ಬರ ಒಡೆತನದ ಮದ್ಯದಂಗಡಿಗೂ ಸಹ ಇತ್ತೀಚಿಗಷ್ಟೇ ಅನುಮತಿ ನೀಡಲಾಗಿತ್ತು.
ಹೆಚ್ಚುತ್ತಿರುವ ಮದ್ಯದ ದರದಿಂದಾಗಿ ಅಬಕಾರಿ ಇಲಾಖೆ ಈಗಾಗಲೇ ನಷ್ಟದಲ್ಲಿದ್ದು, ಸಿಕ್ಕಸಿಕ್ಕ ಕಡೆಯೆಲ್ಲಾ ನೂತನ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡುತ್ತಿದೆ. ಮದ್ಯದ ಮಾರಾಟವನ್ನು ಹೆಚ್ಚಿಸಲು ಸರ್ಕಾರ ಹರಸಾಹಸ ನಡೆಸುತ್ತಿದೆ. ಇದರ ನಡುವೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆ ಹೊಲಗು ತೋರುತ್ತಿರುವ ಎಸ್ ಟಿ ಸೋಮಶೇಖರ್ ಅವರು ಈ ರೀತಿ ಮನವಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
Comments are closed.