KSET ಪಾಸ್ ಆಗಿ ಅಧ್ಯಾಪಕಿಯಾಗುವ ಅರ್ಹತೆ ಪಡೆದ BMTC ಲೇಡಿ ಕಂಡಕ್ಟರ್!!

Share the Article

KSET: ಸಾಧನೆಗಳಿಗೆ ಇತಿ-ಮಿತಿಗಲಿಲ್ಲ. ಸಾಧಿಸಿದರೆ ‘ಸಬಲ’ ಕೂಡ ನುಂಗಬಹುದೇ ಎಂಬ ಗಾದೆ ಇದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯಮ್ಮ ಅವರು, ತಮ್ಮ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಸಾಧನೆ ಮಾಡಿದ್ದಾರೆ. 

ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನವೆಂಬರ್ 21 ರಂದು ಪ್ರಕಟಿಸಿದ ಕೆ-ಸೆಟ್ 2025 ಫಲಿತಾಂಶದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯಮ್ಮ ಅವರು ಕನ್ನಡ ವಿಷಯದಲ್ಲಿ ತೇರ್ಗಡೆಯಾಗುವ ಮೂಲಕ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದಿದ್ದಾರೆ. 

 ಪ್ರಸ್ತುತ ಅಧ್ಯಯನವನ್ನು ಕೈಗೊಂಡಿರುವಂತಹ ವಿದ್ಯಾರ್ಥಿಗಳೇ ಕೆಸೆಟ್ ಪರೀಕ್ಷೆಯನ್ನು ಪಾಸಾಗಲು ಹರಸಾಹಸ ಪಡುತ್ತಾರೆ. ನಿರಂತರ ಓದಿದ್ದರು ಕೂಡ, ಅನೇಕ ಬಾರಿ ಪರೀಕ್ಷೆಗಳನ್ನು ಎದುರಿಸಿ ಅನುತ್ತೀರ್ಣರಾಗಿ ಮುನ್ನಡೆಯುತ್ತಿದ್ದಾರೆ. ಆದರೆ ಇವರೆಲ್ಲರ ನಡುವೆ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದು, ದಿನನಿತ್ಯ ಉದ್ಯೋಗದಲ್ಲಿ ನಿರತರಾಗಿರುವ ಜಯಮ್ಮ ಅವರು ಕೆ ಸೆಟ್ ಪರೀಕ್ಷೆ ಪಾಸಾಗಿ ಓದುಗರಿಗೆ ಮಾದರಿಯಾಗಿದ್ದಾರೆ.

ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿರುವ ಜಯಮ್ಮ, “ನನ್ನದು ದಿನನಿತ್ಯದ ಬಸ್ ಡ್ಯೂಟಿ. ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸದ ಒತ್ತಡ ಇರುತ್ತದೆ. ಆದರೂ, ನನ್ನ ಗುರಿ ಮುಟ್ಟಲೇಬೇಕೆಂಬ ಛಲದಿಂದ ಪ್ರತಿದಿನ ಕೆಲಸ ಮುಗಿಸಿ ಬಂದ ನಂತರ ಬೆಳಗಿನ ಜಾವ 3 ರಿಂದ 4 ಗಂಟೆಗಳ ಕಾಲ ಓದುತ್ತಿದ್ದೆ,” ಎಂದು ಹೇಳಿದ್ದಾರೆ. ಈ ಹಿಂದೆ ಎರಡು ಬಾರಿ ಕೆ-ಸೆಟ್ ಪರೀಕ್ಷೆ ಬರೆದಿದ್ದ ಅವರು, ಅಲ್ಪ ಅಂಕಗಳ ಅಂತರದಲ್ಲಿ ಪಾಸಾಗಲು ವಿಫಲರಾಗಿದ್ದರು. ಆದರೆ, ಸೋಲದೆ ಮೂರನೇ ಪ್ರಯತ್ನದಲ್ಲಿ ಗೆದ್ದು ಬೀಗಿದ್ದಾರೆ.

Comments are closed.