Bengaluru : ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆಶಿ ಜಂಟಿ ಸುದ್ದಿಗೋಷ್ಠಿ – ಮುಂದಿನ ನಡೆ ಬಗ್ಗೆ ಅಚ್ಚರಿ ಹೇಳಿಕೆ

Bengaluru : ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜಬರ್ದಸ್ತ್ ಹೋರಾಟ ನಡೆಯುತ್ತಿದೆ. ಇದರ ನಡುವೆ ಹೈಕಮಾಂಡ್ ಅಂಗಳಕ್ಕೆ ಕೂಡ ಈ ವಿಚಾರ ತಲುಪಿದೆಹಲಿಯಲ್ಲಿಯೂ ಹೈವೋಲ್ ಟೈಪ್ ಸಭೆ ಕೂಡ ನಡೆದಿದೆ. ಈ ಬೆನ್ನಲ್ಲೇ ಇದೀಗ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರು ಜಂಟಿಯಾಗಿ ಸುದ್ದಿಗೋಷ್ಠಿ ಕರೆದು ತಮ್ಮಿಬ್ಬರ ಮುಂದಿನ ನಡೆಯ ಕುರಿತು ಮಾಹಿತಿ ನೀಡಿದ್ದಾರೆ.

ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಈ ಕುರಿತ ಫೋಟೋ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ನಾಯಕರು ಸುದ್ದಿಗೋಷ್ಠಿ ಕರೆದು ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ನಾವು ಮುಂದಿನ ಅಧಿವೇಶನಕ್ಕೆ ತಯಾರಿ ನಡೆಸುತ್ತಿದ್ದೇವೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ಒಗ್ಗಟ್ಟು ಪ್ರದರ್ಶನಗೊಳ್ಳಲಿದೆ. ಬಿಜೆಪಿ ಬಹುಮತ ಸಾಬೀತುಪಡಿಸಿ ಎಂದು ಕೇಳಿದರು ನಾವಿಬ್ಬರು ಒಟ್ಟಾಗಿ ನಿಂತು ಬಲಪ್ರದರ್ಶಿಸುತ್ತೇವೆ ಇಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
ಅಲ್ಲದೆ ಈಗಾಗಲೇ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಗೊಂದಲಗಳಿಗೆ ತೆರೆಹಡಿಯಲು ಈ ಸುದ್ದಿಗೋಷ್ಠಿ ಕರೆದಿದ್ದೇವೆ. ಸುಳ್ಳು ಆರೋಪ ಹೊರಿಸುವುದು ಬಿಜೆಪಿಯ ಚಾಳಿಯಾಗಿದೆ. ಆದರೆ ನಮ್ಮಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಿಲ್ಲ ನಾವು ಚೆನ್ನಾಗಿ ಇದ್ದೇವೆ ಎಂದು ಇಬ್ಬರು ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿಎಂ ಕುರ್ಚಿ ವಿವಾದಕ್ಕೆ ಇಬ್ಬರು ಒಟ್ಟಿಗೆ ತೆರೆ ಎಳೆದಿದ್ದಾರೆ
Comments are closed.