Ayyappa swamy: ಅಯ್ಯಪ್ಪ ಸ್ವಾಮಿ ಭಕ್ತರಿಗೆ ಇರುಮುಡಿ ಸಮೇತ ವಿಮಾನ ಪ್ರಯಾಣಕ್ಕೆ ಕೇಂದ್ರ ಅಸ್ತು

Share the Article

Ayyappa swamy: ಇತ್ತೀಚೆಗೆ ಅಯ್ಯಪ್ಪ ಸ್ವಾಮಿ (Ayyappa swamy) ದರ್ಶನಕ್ಕೆ ತೆರಳಿದ್ದ ಭಕ್ತರು (Devotees) ಅಲ್ಲಿನ ಅವ್ಯವಸ್ಥೆಗಳ ಕುರಿತು ತಮ್ಮ ಬೇಸರ ಹೊರ ಹಾಕಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿ ವರ್ಷ ಭಕ್ತರು ಆಗಮಿಸುತ್ತಾರೆ ಎಂಬ ಮಾಹಿತಿ ಇದ್ದರೂ ಸಹ ಕನಿಷ್ಠ ವ್ಯವಸ್ಥೆಗಳನ್ನು ಕಲ್ಪಿಸಲಾಗಿಲ್ಲ ಎಂಬ ವಿಚಾರ ಭಕ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಅಯ್ಯಪ್ಪನ ಭಕ್ತರಿಗೆ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ (Ministry of Aviation) ಗುಡ್ ನ್ಯೂಸ್ ಕೊಟ್ಟಿದೆ.

ಇನ್ಮುಂದೆ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯಲು ಶಬರಿಮಲೆಗೆ ಹೋಗುವ ಭಕ್ತರು ವಿಮಾನಗಳಲ್ಲಿ ತಮ್ಮ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಲು ಅವಕಾಶ ಮಾಡಿಕೊಟ್ಟಿದೆ. ಶಬರಿಮಲೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ಇರುಮುಡಿಯನ್ನ ವಿಮಾನದಲ್ಲಿ ಕೊಂಡೊಯ್ಯಲು ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ ಎಂದು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ತಿಳಿದಿದ್ದಾರೆ. ಈ ನಿರ್ಧಾರ ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸುವ ನಮ್ಮ ಬದ್ಧತೆಯನ್ನ ಪ್ರತಿಬಿಂಬಿಸುತ್ತದೆ ಮತ್ತು ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲತೆಗಾಗಿ, ಮತ್ತಿ ಭಕ್ತರ ಭಾವನೆ, ಸಂಪ್ರದಾಯ, ಪದ್ಧತಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹಾಗೂ ಇರುಮುಡಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

Comments are closed.