Yatindra Siddaramiah : ಹೈಕಮಾಂಡ್ ಗೆ ಮಾತು ಕೊಟ್ಟಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರೆ – ಪುತ್ರ ಯತೀಂದ್ರ ಹೇಳಿಕೆ

Yatindra Siddaramiah : ಸಿಎಂ ಕುರ್ಚಿ ವಿಚಾರ ಬೀದಿ ರಂಪಾಟವಾಗುತ್ತಿರುವ ನಡುವೆ ಸಿದ್ದರಾಮಯ್ಯ ಅವರ ಸುಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, ನಮ್ಮ ತಂದೆ ಹೈಕಮಾಂಡ್ಗೆ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಮೈಸೂರಲ್ಲಿ ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಅವರನ್ನು ಕೆಳಗಿಳಿಸಲು ಯಾವುದೇ ಕಾರಣಗಳು ಇಲ್ಲ. ನನಗಿರುವ ಮಾಹಿತಿ ಪ್ರಕಾರ ಯಾವುದೇ ಅಧಿಕಾರ ಹಂಚಿಕೆ ಸೂತ್ರಗಳು ನಡೆದಿಲ್ಲ. ಅಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಮೇಲೆ ಯಾವುದೇ ಆರೋಪಗಳು ಕೂಡ ಇದುವರೆಗೂ ಕೇಳಿ ಬಂದಿಲ್ಲ. ಹೀಗಾಗಿ ಹೈಕಮಾಂಡ್ಗೆ ಏನು ಮಾತು ಕೊಟ್ಟಿದ್ದಾರೋ ಅದರಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ
Comments are closed.