Map Approval: ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ GBA ಮಾರ್ಗಸೂಚಿ ಪ್ರಕಟ; ಮನೆ ತಳಪಾಯಕ್ಕೂ ಪ್ರಮಾಣ ಪತ್ರ ಕಡ್ಡಾಯ!

Share the Article

Map Approval: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇದ್ದ ನಕ್ಷೆ ಮಂಜೂರಾತಿ (Map Approval) ನೀಡುವ ಅಧಿಕಾರವನ್ನ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ವರ್ಗಾಯಿಸಿದ ಬೆನ್ನಲ್ಲೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಕಟ್ಟಡ ನಕ್ಷೆ ಉಲ್ಲಂಘನೆ ತಡೆಯಲು ಮುಂದಾಗಿರುವ ಜಿಬಿಎ (Greater Bengaluru Authority) ತಳಪಾಯಕ್ಕೂ ಪ್ರಮಾಣ ಪತ್ರ ಪಡೆಯುವುದನ್ನ ಕಡ್ಡಾಯಗೊಳಿಸಿದೆ.

ಅನಧಿಕೃತ ಕಟ್ಟಡಗಳ ತಡೆಗೆ ಏನೆಲ್ಲ ಮಾರ್ಗಸೂಚಿ:1. ನಕ್ಷೆ ಅನುಮೋದನೆ ಆದ ಮೇಲೆ ತಳಪಾಯದ ಗಡಿರೇಖೆಯ ಗುರುತು ಪಡೆಯಬೇಕು.2. ನಗರ ಯೋಜನೆ ವಿಭಾಗದ ನಗೆ ಆಯೋಜಕರು ಕಟ್ಟಡ ಮಾಲೀಕರ ಮುಂದೆ ಗುರುತು ಮಾಡಿ ತಳಪಾಯದ ಪ್ರಮಾಣ ಪತ್ರ ನೀಡಬೇಕು.3. ನಗರ ಆಯೋಜಕರು ಕಟ್ಟಡ ನಿರ್ಮಾಣದ ತಪಾಸಣೆಯನ್ನ ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್‌ ತಿಂಗಳಲ್ಲಿ ಕೈಗೊಳ್ಳಬೇಕು.

ಅಕ್ರಮ ಕಟ್ಟಡ ತೆರವಿಗೆ ಏನು ನಿಯಮ?

1. ನಕ್ಷೆ ಮಂಜೂರಾತಿ ಉಲ್ಲಂಘಿಸಿ ಹೆಚ್ಚುವರಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಆದೇಶ ಮಾಡಬೇಕು.2. ಅಕ್ರಮ ಕಟ್ಟಡ ತೆರವಿಗೆ ನಿಗದಿಯಾದ ಸಮಯದಲ್ಲಿ ತೆರವು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ.3. ಅಕ್ರಮ – ಅನಧಿಕೃತ ಕಟ್ಟಡಗಳ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಗದಂತೆ ನೋಡಿಕೊಳ್ಳಬೇಕು.4. ಅನಧಿಕೃತ ಕಟ್ಟಡ ಅಂತ ದೂರು ಸ್ವೀಕರಿಸಿದ 130 ದಿನಗಳ ಒಳಗಡೆ ತೆರವು ಮಾಡಬೇಕು.5. ದೂರು ಬಂದ ಬಳಿಕ ಎಡಿಟಿಪಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ವರದಿ ಸಲ್ಲಿಕೆ ಮಾಡಬೇಕು.6. ಸ್ಥಳ ಮಹಜರು ಬಳಿಕ 15 ದಿನ ಜಂಟಿ ಆಯುಕ್ತರು. ತೆರವಿಗೆ ಜಿಬಿಎಗೆ ಪ್ರಸ್ತಾವನೆ ಸಲ್ಲಿಸಬೇಕು.7. ಪ್ರಸ್ತಾವನೆ ಸಲ್ಲಿಕೆ ಆದ ಬಳಿಕ ತೆರವು ಕಾರ್ಯಾಚರಣೆ.

Comments are closed.