Viral Video : ನೀರಿನ ಪೈಪರ್ ರಿಪೇರಿ ಮಾಡುವಾಗ ಹೆಬ್ಬಾವು ದಾಳಿ – ಕೆಲ ನಿಮಿಷಗಳಲ್ಲಿ ಆಗಿದ್ದೇನು?

Viral Video : ವಾಟರ್ ಮ್ಯಾನ್ ಒಬ್ಬ ನೀರಿನ ಪೈಪ್ ರಿಪೇರಿ ಮಾಡುವಾಗ ಹೆಬ್ಬಾವು ದಾಳಿ ಮಾಡಿದ್ದು, ಕೆಲ ನಿಮಿಷಗಳ ಕಾಲ ಒದ್ದಾಡಿ ಬಚಾವಾದ ಘಟನೆ ನಡೆದಿದೆ.

ಹೌದು, ನವೆಂಬರ್ 24ರಂದು (ಸೋಮವಾರ) ನಂದ್ ಸಿಂಗ್ ಎಂಬುವವರು ಉಷ್ಣ ವಿದ್ಯುತ್ ಸ್ಥಾವರದಲ್ಲಿ ನೀರಿನ ಪೈಪ್ಲೈನ್ ಪರಿಶೀಲಿಸುತ್ತಿದ್ದ ವೇಳೆ, ಹತ್ತಿರದಲ್ಲಿ ಕುಳಿತಿದ್ದ ಹೆಬ್ಬಾವೊಂದು ದಾಳಿ ಮಾಡಿದೆ. ನಂದ್ ಸಿಂಗ್ ಅವರ ಕಾಲುಗಳಿಗೆ ಹೆಬ್ಬಾವು ಸುತ್ತಿಕೊಂಡಿದ್ದು, ಸುಮಾರು 10 ನಿಮಿಷಗಳ ಕಾಲ ಅದರಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.
ಸಿಂಗ್ ಒದ್ದಾಡುತ್ತಿರುವುದನ್ನು ನೋಡಿ, ಸಹೋದ್ಯೋಗಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಹೆಬ್ಬಾವಿನಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಇದೀಗ ಈ ವಿಡಿಯೋ @kotacityraj ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಇದು ತುಂಬಾ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
Comments are closed.