Smruthi Mandana : ‘ಸ್ಮೃತಿ ಸಿಗೋದು 3-4 ತಿಂಗಳಿಗೊಮ್ಮೆ, ಆಕೆ ನಂಗೆ ತಲೆನೋವು!!’ ಡೇಟಿಂಗ್ ಹುಡ್ಗಿ ಜತೆ ಸ್ಮೃತಿ ಮಂಧಾನ ಭಾವಿಪತಿ ಚಾಟ್ ವೈರಲ್!

Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ಸ್ಮೃತಿ ಮಂದಾನ ಬಾವಿಪತಿಗೂ ಕೂಡ ಆರೋಗ್ಯ ಕೈಕೊಟ್ಟಿದೆ. ಇದರ ನಡುವೆ ಸ್ಮೃತಿ ಮಂದಾನ ಅವರು ತಮ್ಮ ಸೋಶಿಯಲ್ ಮೀಡಿಯಾ ಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಹೀಗಾಗಿ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದು ಬರೀ ಗಾಸಿಪ್ ಎಂದು ಹೇಳಲಾಗಿತ್ತು. ಆದರೆ ಇದೀಗ ಎಕ್ಸ್ ವೇದಿಕೆಯಲ್ಲಿ ಪಲಾಶ್ ಮುಚ್ಚಲ್ ಮೇರಿಡಿಸ್ಕೊಟ ಎಂಬ ಯುವತಿ ಜತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್ಶಾಟ್ ವೈರಲ್ ಆಗಿವೆ. ಈ ಫೋಟೊಗಳಲ್ಲಿ ಯುವತಿಯನ್ನು ಡೇಟಿಂಗ್ಗೆ ಕರೆದಿರುವ ಪಲಾಶ್ ಮುಚ್ಚಲ್ ಸ್ಮೃತಿ ಮಂಧಾನ ಜತೆ ನೀವು ಲವ್ನಲ್ಲಿದ್ದೀರ ಅಲ್ಲವೇ ಎಂದು ಯುವತಿ ಪ್ರಶ್ನಿಸಿದಾಗ ಆಕೆ ಸಿಗುವುದೇ ಮೂರ್ನಾಲ್ಕು ತಿಂಗಳಿಗೊಮ್ಮೆ, ಈ ಹಿಂದೆ ಆಕೆಯ ಜತೆ ತೆರಳಿ ಬೆಂಬಲ ನೀಡುತ್ತಿದ್ದೆ, ಆದರೆ ಈಗ ಅದು ತಲೆನೋವಾಗಿಬಿಟ್ಟಿದೆ ಎಂದಿದ್ದಾನೆ.
ಹೀಗೆ ಪಲಾಶ್ ಮುಚ್ಚಲ್ರದ್ದು ಎನ್ನಲಾದ ಹಲವು ಚಾಟ್ಗಳನ್ನು ನಾನೇ ಮಾಡಿದ್ದು ಎಂದು ಆ ಯುವತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು, ಸದ್ಯ ಮದುವೆ ಮುರಿದು ಬೀಳಲು ಕಾರಣಳಾದ ನೃತ್ಯಗಾರ್ತಿ ತಾನೇ ಎಂದು ಎಲ್ಲರೂ ತಿಳಿದುಕೊಳ್ಳುತ್ತಿದ್ದಾರೆ, ಆದರೆ ಅದು ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಪಲಾಶ್ ತನ್ನ ಜತೆ ಚಾಟ್ ಮಾಡಿದ್ದು ಇದೇ ವರ್ಷದ ಮೇ ತಿಂಗಳಿನಲ್ಲಿ, ಆತ ಯಾವ ರೀತಿಯ ಮನುಷ್ಯ ಎಂಬುದನ್ನು ತಿಳಿದುಕೊಳ್ಳಲು ಚಾಟ್ ಮಾಡಿದೆ, ಆದರೆ ತಾನು ಆತನನ್ನು ಭೇಟಿ ಮಾಡಲಿಲ್ಲ, ತಾನು ಸ್ಮೃತಿ ಮಂಧಾನ ಅಭಿಮಾನಿ, ಈ ಸಂದರ್ಭದಲ್ಲಿ ಈ ಸ್ಪಷ್ಟನೆ ನೀಡುವ ಅಗತ್ಯವಿದ್ದ ಕಾರಣ ಎಲ್ಲವನ್ನೂ ಬಿಚ್ಚಿಟ್ಟೆ ಎಂದು ಬರೆದುಕೊಂಡಿದ್ದಾಳೆ.
Comments are closed.