ಭಾರತ ಬಿಟ್ಟು ಚೀನ ಕಡೆ ಮುಖ ತಿರುಗಿಸಿದ ಇಥಿಯೋಪಿಯಾ ಜ್ವಾಲಾಮುಖಿ ಬೂದಿ

ಹೊಸದಿಲ್ಲಿ: ಭಾರತದ ಹೊರಟಿದ್ದ ಇಥಿಯೋಪಿಯಾದ ಹೇಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಪೋಟದಿಂದ ಹೊರಹೊಮ್ಮಿದ ರಾಸಾಯನಿಕ ಯುಕ್ತ ಬೂದಿಯು ಮಂಗಳವಾರ ಸಂಜೆ 7.30ಕ್ಕೆ ಭಾರತವನ್ನು ಬಿಟ್ಟು ಸಾಗಿದೆ. ಇದರಿಂದ ದೇಶದ ಜನ ನಿಟ್ಟುಸಿರು ಬಿಡುವಂತಾಗಿದೆ. ಭಾರತದಿಂದ ಸರಿದ ಆತಂಕದ ಕಾರ್ಮೋಡವು ಚೀನಾದತ್ತ ಮುಖ ಮಾಡಿದೆ ಮೆಟ್ಸ್ಟ್ ವೆದರ್ ವರದಿ ಮಾಡಿದೆ.

ಜ್ವಾಲಾ ಬೂದಿಯ ಕಾರ್ಮೋಡವು ಗಂಟೆಗೆ 100-120 ಕಿ.ಮೀ. ವೇಗದಲ್ಲಿ 45 ಸಾವಿರ ಅಡಿ ಎತ್ತರದಲ್ಲಿ ಸಾಗುತ್ತಿದ್ದು ಉತ್ತರ ಭಾರತದ ಕೆಲವು ಭಾಗಗಳು ಸೇರಿ ಹಿಮಾಲಯ ಶಿಖರಗಳನ್ನು ದಾಟಿ ಚೀನ ಕಡೆ ಸಾಗಲಿದೆ. ಈ ವೇಳೆ ಹಿಮಾಲಯ ಶಿಖರಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ತಿಳಿಸಿದೆ.
ಎತ್ತರದಲ್ಲಿ ಹಾರಾಟ ನಡೆಸುವ ವಿಮಾನದ ಎಂಜಿನ್‌ಗೆ ಈ ಬೂದಿಯಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆಯ ಕಾರಣ ವಾಯುವ್ಯ ಭಾರತದ ವಿಮಾನಯಾನ ಮಾರ್ಗಗಳ ವಿಮಾನಗಳನ್ನು ರದ್ದುಗೊಳಿಸಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಸೂಚಿಸಿತ್ತು. ಏರ್ ಇಂಡಿಯಾ, ಇಂಡಿಗೋ, ಆಕಾಸ್ ಸೇರಿದಂತೆ ಇನ್ನಿತರೆ ವಿಮಾನಯಾನ ಸಂಸ್ಥೆಗಳು ಕೆಲವು ವಿಮಾನಗಳನ್ನು ರದ್ದುಗೊಳಿಸಿದ್ದರೆ, ಇನ್ನು ಕೆಲವು ರಸ್ತೆ ಬದಲಿಸಿ ಸಂಚರಿಸಿದ್ದವು.
ದಿಲ್ಲಿ ಮಾಲಿನದ ಪರಿಣಾಮವಿಲ್ಲ
ಭಾರತದ ರಾಜಸ್ಥಾನ, ಮಹಾರಾಷ್ಟ್ರ ಗುಜರಾತ್ ಭಾಗಗಳಲ್ಲಿ ಬೂದಿ ಆವರಿಸಿಕೊಂಡಿದ್ದರಿಂದ ಮಂಗಳವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 7 ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಜತೆಗೆ ಹಲವಾರು ಹೆಚ್ಚು ವಿದೇಶಿ ವಿಮಾನಗಳು ವಿಳಂಬವಾಗಿವೆ. ಆಕಾಸ್, ಏರ್ ಇಂಡಿಯಾ ಮುಂತಾದ ವಿಮಾನ ಸಂಸ್ಥೆಗಳು ಪ್ರಾದೇಶಿಕ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದವು.
ಈ ಜ್ವಾಲಾಮುಖಿಯ ಬೂದಿಯ, ಮೊದಲೇ ಕೀಳು ಪರಿಸರದಿಂದ ನೊಂದಿರುವ ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಸುತ್ತುವರೆದಿದ್ದರೂ ವಾಯು ಗುಣಮಟ್ಟ ‘ಸೂಚ್ಯಂಕದ (ಎಕ್ಯುಐ) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. ದಿಲ್ಲಿಯ ವಾಯು ಮಾಲಿನ್ಯದ ಮೇಲೆ ತತ್ ಕ್ಷಣ ಪರಿಣಾಮ ಬೀರುವುದಿಲ್ಲವಾದರೂ ನಾವು ಮೇಲ್ವಿಚಾರಣೆ ಅಗತ್ಯ ಎನ್ನಲಾಗಿದೆ.
Comments are closed.