Mantesh Beelagi: ಬಡತನದಲ್ಲಿ ಬೆಂದ ಮಾಂತೇಶ್ ಬೀಳಗಿ IAS ಆಗಿದ್ದು ಹೇಗೆ? ಇಲ್ಲಿದೆ ನೋಡಿ ಮನಕಲಕುವ ಘಟನೆ

Mantesh Beelagi : ನಾಡಿನ ಹೆಸರಂತ ಹಾಗೂ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಮಾಂತೇಶ್ ಬೀಳಗಿಯವರು ನಿನ್ನೆ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಿಧನರಾಗಿದ್ದಾರೆ. ಇಡೀ ರಾಜ್ಯವೇ ನಿಷ್ಕಳಂಕ ಅಧಿಕಾರಿಯ ಸಾವಿಗೆ ಕಂಬನಿ ಮಿಡಿದಿದೆ. ಇದರ ಬೆನ್ನಲ್ಲೇ ಮಾಂತೇಶ್ ಅವರು ಐಎಎಸ್ ಅಧಿಕಾರಿಯಾಗಿದ್ದು ಹೇಗೆ? ಅವರು ಪಟ್ಟ ಕಷ್ಟದ ಪಾಡೇನು ಎಂಬುದು ಕೂಡ ಮುನ್ನಲೆಗೆ ಬಂದಿದೆ.

ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ರೂಪಾಯಿಗೂ ಲಂಚಕ್ಕೆ ಬೇಡಿಕೆ ಇಡದಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂಬುದು ಅವರನ್ನು ಬಲ್ಲವರ ಮಾತು. ತನಗೆ 5 ವರ್ಷವಿದ್ದಾಗ ತನ್ನ ತಂದೆಯನ್ನು ಅವರು ಕಳೆದುಕೊಂಡರು. ಕಡು ಬಡತನದಲ್ಲಿ ತಾಯಿ ಕೂಲಿ ನಾಲಿ ಮಾಡಿ ಮಗ ಮಹಾಂತೇಶ್ ಬೀಳಗಿ ಸಾಕಿದ್ರು. ತನಗೆ ವಿಧವಾ ವೇತನ ಬರುತ್ತದೆ ಎನ್ನುವ ಮಾಹಿತಿ ಆಕೆಗೆ ಸಿಕ್ಕಿತ್ತು. ಇದಕ್ಕಾಗಿ ಅಧಿಕಾರಿಯ ಬಳಿಗೆ ತೆರಳಿ. ತನ್ನ ಕಡು ಬಡತನದ ಜೀವನದ ಬಗ್ಗೆ ಹೇಳಿಕೊಂಡು ವಿಧವಾ ವೇತನಕ್ಕೆ ಮನವಿ ಮಾಡಿದರು.
ಮಾಸಿಕ 25 ರೂಪಾಯಿ ವಿಧವಾ ವೇತನ ಮಾಡಿಕೊಡಲು ಆ ಅಧಿಕಾರಿ ಮಾತ್ರ ರೂ.100 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯ ತಿಳಿದಂತ ಮಹಾಂತೇಶ್ ಬೀಳಗಿ ಅವರು, ಅಂದೇ ತಾನು ಲಂಚ ಪಡೆಯದ ಅಧಿಕಾರಿಯಾಗಬೇಕು ಎಂಬುದಾಗಿ ನಿರ್ಧರಿಸಿದರು. ತಾನು ಐಎಎಸ್ ಮಾಡಬೇಕು ಎಂಬುದಾಗಿ ಛಲ ತೊಟ್ಟಂತ ಛಲದಂಕ ಮಲ್ಲರಾದಂತ ಮಹಾಂತೇಶ್ ಬೀಳಗಿ ಅವರು ಕನ್ನಡ ಮಾಧ್ಯಮದಲ್ಲಿ ಓದಿದರೂ, ಎಂ.ಎ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸಿದರು.
2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದರು. ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದ ಬೀಳಗಿ, ದಾವಣಗೆರೆ ಡಿಸಿ ಆಗಿದ್ದ ವೇಳೆ ಹಲವು ಮಹತ್ವದ ಕೆಲಸ ಕಾರ್ಯಗಳನ್ನು ಮಾಡಿದ್ದರು. ಇಷ್ಟೇ ಅಲ್ಲ ಜನರ ನೆಚ್ಚಿನ ಡಿಸಿಯಾಗಿ ಹೊರಹೊಮ್ಮಿದ್ದರು.
ಇನ್ನೂ ಕರ್ನಾಟಕ ವಿ.ವಿ.ಯ ಇಂಗ್ಲಿಷ್ ವಿಭಾಗದಿಂದ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದ ಬೀಳಗಿ ಅವರು ಕಡುಬಡತನದಲ್ಲಿ ಬೆಳೆದು ಬಂದಿದ್ದರು. ಹೀಗಾಗಿ, ಧಾರವಾಡದಲ್ಲಿ ಇಂಗ್ಲಿಷ್ ಟ್ಯೂಷನ್ ಹೇಳುತ್ತಿದ್ದರು. ಬಡತನವನ್ನು ಮೆಟ್ಟಿನಿಂತು ಅಧಿಕಾರಿಯಾಗಿ ಬೆಳೆದ ಬಗೆಗಿನ ಅವರ ಭಾಷಣದ ವಿಡಿಯೊಗಳು ಹಲವು ಜನರಿಗೆ ಸ್ಫೂರ್ತಿಯಾಗಿದ್ದವು
Comments are closed.