Home News ಗೋಲ್ಡ್ ಪದ ಖಾಸಗಿ ಕಂಪನಿ ಆಸ್ತಿ, ಬೇರಾರು ಬಳಸುವಂತಿಲ್ಲ: ಹೈಕೋರ್ಟ್

ಗೋಲ್ಡ್ ಪದ ಖಾಸಗಿ ಕಂಪನಿ ಆಸ್ತಿ, ಬೇರಾರು ಬಳಸುವಂತಿಲ್ಲ: ಹೈಕೋರ್ಟ್

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ‘ಗೋಲ್ಡ್’ ಎಂಬ ಪದವು ಖಾಸಗಿ ಕಂಪನಿಯ ಆತ್ಮೀಯವಾಗಿದ್ದು ಇನ್ಮುಂದೆ ಅದನ್ನು ಯಾರು ಬಳಸದಂತೆ ಹೈಕೋರ್ಟ್ ಎಚ್ಚರಿಕೆಯ ತೀರ್ಪು ನೀಡಿದೆ. ಗೋಲ್ಡ್ ಪದವು ಐಟಿಸಿ ಸಂಸ್ಥೆಗೆ ಸೇರಿದ್ದು ಎಂದು ದಿಲ್ಲಿ ಹೈಕೋರ್ಟ್ ಮಧ್ಯಾಂತರ ಆದೇಶ ಹೊರಡಿಸಿದೆ.’1910ರಲ್ಲೇ ‘ಗೋಲ್ಡ್ ಪ್ಲೇಕ್’ ಎಂಬ ಟ್ರೇಡ್ ಮಾರ್ಕ್ ಪಡೆದಿದ್ದೇವೆ. ಆದರೆ ತನ್ನ ಸಿಗರೇಟ್‌ಗಳನ್ನೇ ಹೋಲುವ ಪ್ಯಾಕೆಟ್, ಅಕ್ಷರ, ಬಣ್ಣ ಲೋಗೋ ಮತ್ತು ಪ್ಯಾಕಿಂಗ್‌ನಲ್ಲಿ ‘ಗೋಲ್ಡ್ ಪ್ಲೇಮ್’, ‘ಗೋಲ್ಡ್ ಫೈಟರ್’ ಇತ್ಯಾದಿ ಬ್ರಾಂಡ್ ಹೆಸರಿನಲ್ಲಿ ಸ್ಥಳೀಯ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಐಟಿಸಿ ಕಂಪನಿಯು ಆರೋಪಿಸಿತ್ತು.

‘ಗೋಲ್ಡ್ ಎಂಬ ಪದವು ಐಟಿಸಿಯ ಉತ್ಪನ್ನಗಳೊಂದಿಗೆ ಹಲವಾರು ದಶಕಗಳಿಂದ ಥಳಕು ಹಾಕಿಕೊಂಡಿವೆ. ಆದರೆ ಪ್ರತಿವಾದಿ ಸಂಸ್ಥೆಗಳು, ಐಟಿಸಿಯ ಬ್ರಾಂಡ್ ಉಲ್ಲಂಘಿಸಿ ಗ್ರಾಹಕರಲ್ಲಿ ಗೊಂದಲವನ್ನು ಉಂಟುಮಾಡುವ ಮತ್ತು ಆಮೂಲಕ ಸಂಸ್ಥೆಗೆ ನಷ್ಟ ಉಂಟು ಮಾಡುತ್ತಿವೆ.