ಮಂಗಳೂರು ಮತ್ತು ಮುಂಬಯಿ ಮಧ್ಯೆ ಇಂಡಿಗೋ ನಾನ್ ಸ್ಟಾಪ್ ವಿಮಾನ: ಡಿ. 25 ರಿಂದ ಶುರು

ಮಂಗಳೂರು: ಜನಪ್ರಿಯ ಇಂಡಿಗೋ ವಿಮಾನಯಾನ ಸಂಸ್ಥೆಯು ಮಂಗಳೂರಿನಿಂದ ಮುಂಬೈ ಮಹಾನಗರಕ್ಕೆ ನೇರ ವಿಮಾನ ಸೌಲಭ್ಯ ಕಲ್ಪಿಸುತ್ತಿದೆ. ಮಂಗಳೂರು ನಿಲ್ದಾಣದಿಂದ ವಿಮಾನ ಮುಂಬಯಿಗೆ ಡಿ. 25 ರಿಂದ ಇಂಡಿಗೋ ನೇರ ವಿಮಾನ ಪ್ರಯಾಣ ಆರಂಭಗೊಳ್ಳಲಿದೆ.

ಇಂಡಿಗೋ ವಿಮಾನವು ಮಂಗಳೂರಿನಿಂದ ಸೋಮವಾರ ಮತ್ತು ಗುರುವಾರ ಸಂಜೆ 4.05ಕ್ಕೆ ಹೊರಟು 5.45ಕ್ಕೆ ಮುಂಬಯಿ ತಲುಪಲಿದೆ. ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ಮಧ್ಯಾಹ್ನ 12.40ಕ್ಕೆ ಹೊರಟು 2.20ಕ್ಕೆ ಮುಂಬಯಿ ತಲುಪಲಿದೆ. ಅದೇ ರೀತಿ ಮುಂಬಯಿಯಿಂದ.ಮಂಗಳೂರಿಗೆ ಹೊರಡುವ ವಿಮಾನವು ಪ್ರತಿದಿನ ಬೆಳಗ್ಗೆ 10.40ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಮಂಗಳೂರು ತಲುಪಲಿದೆ. ಈ ನೇರ. ವಿಮಾನ ಯಾಗ ಪ್ರಯಾಣವು ಬಿಸಿನೆಸ್ ವರ್ಗಕ್ಕೆ ಮುಂಬೈ ಮತ್ತು ಮಂಗಳೂರು ಮಧ್ಯೆ ಹೆಚ್ಚಿನ ಸಂಪರ್ಕ ಏರ್ಪಡಿಸಲಿದ್ದು, ಮಂಗಳೂರು ಕಾಸರಗೋಡು ವ್ಯಾಪ್ತಿಯ ಔದ್ಯಮಿಕ ವರ್ಗಕ್ಕೆ ಹೆಚ್ಚಿನ ಅನುಕೂಲ ಆಗಲಿದೆ.
Comments are closed.