ಗುರುದ್ವಾರ ಪ್ರವೇಶಕ್ಕೆ ಕ್ರೈಸ್ತ ಸೇನಾಧಿಕಾರಿ ನಿರಾಕರಣೆ: ವಜಾ ಎತ್ತಿ ಹಿಡಿದ ಪೀಠ, ಸುಪ್ರೀಂ ಕೂಡಾ ತರಾಟೆ

Share the Article

ಹೊಸದಿಲ್ಲಿ: ಸಿಖ್ಖರ ಗುರುದ್ವಾರವನ್ನು ಪ್ರವೇಶಿಸಲು ನಿರಾಕರಿಸಿದ ಕ್ರೈಸ್ತ ಸೇನಾಧಿಕಾರಿಯನ್ನು ವಜಾಗೊಳಿಸಿದ ಕ್ರಮವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ಕ್ರೈಸ್ತ ಸೇನಾಧಿಕಾರಿಯ ನಡೆಯನ್ನು ಅಶಿಸ್ತು ಎಂದಿರುವ ಪೀಠವು, ಅವರು ಅದೆಂತಹಾ ಅಪ್ರತಿಮ ಅಧಿಕಾರಿಯೇ ಆಗಿದ್ದರೂ, ಸೇನೆಯಲ್ಲಿರಲು ಅನರ್ಹರು ಎಂದಿದೆ.
ಉನ್ನತ ಸೇನಾಧಿಕಾರಿಗಳ ಆದೇಶ ಪಾಲನೆ ನಿರ್ವಹಿಸಿದ ಕಾರಣ, ಸುಪ್ರೀಂ ಕೋರ್ಟ್ ತೀರ ಕೃಷ ವ್ಯಕ್ತಪಡಿಸಿದೆ. ಆದೇಶ ಪಾಲನೆ ಮಾಡದ ಸೇನಾಧಿಕಾರಿ ಅದೆಂತಹ ಅಧಿಕಾರಿ? ಗುರುದ್ವಾರವು ಅತ್ಯಂತ ಜಾತ್ಯತೀತ ಸ್ಥಳ, ಕ್ರೈಸ್ತರ ನಂಬಿಕೆಯಲ್ಲಿ ಎಲ್ಲಿ ದೇಗುಲ ಪ್ರವೇಶ ನಿಷಿದ್ದ ಅಂತ ಎಲ್ಲಿದೆ? ಎಂದು ಪೀಠ ಪ್ರಶ್ನಿಸಿದೆ.

ಪ್ರಕರಣ ವಿವರ:
2017ರಲ್ಲಿ ಕ್ಯಾವಲರಿ ರೆಜಿಮೆಂಟ್‌ನಲ್ಲಿ ಸಿಕ್ಸ್ ಸಿಬಂದಿಯನ್ನೊಳಗೊಂಡ ಸ್ಕ್ವಾಡ್ರನ್‌ನಲ್ಲಿ ಲೆಫ್ಟಿನೆಂಟ್ ಆಗಿದ್ದ ಸ್ಯಾಮ್ಯುಯೆಲ್ ಕಮಲೇಶನ್‌ ಎಂಬವರನ್ನು ಗುರುದ್ವಾರ ಪ್ರವೇಶಿಸಿ ಕರ್ತವ್ಯ ನಿರ್ವಹಿಸಲಂತೆ ಕೋರಲಾಗಿತ್ತು. ಆತನ ಉನ್ನತಾಧಿಕಾರಿ ಹಾಗೆ ಆದೇಶಿಸಿದ್ದರು. ಗುರುದ್ವಾರ ಪ್ರವೇಶದಿಂದ ತನ್ನ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಸ್ಯಾಮ್ಯುಯೆಲ್ ಅದನ್ನು ನಿರಾಕರಿಸಿದ್ದರು. ಈ ಕಾರಣ ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.
ಇದೀಗ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾ| ಜೊಯ್‌ಮಲ್ಯ ಬಾಗ್ನಿ ಅವರಿದ್ದ ಪೀಠವು ವಿಚಾರಣೆ ನಡೆಸಿದ್ದು ಸೇನೆಯ ನಿರ್ಣಯವನ್ನು ಬೆಂಬಲಿಸಿ ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಜತೆಗೆ ‘ಇದರಿಂದ ಸಮಾಜಕ್ಕೆ ಅವರು ಏನು

Comments are closed.