ಬೆಳ್ತಂಗಡಿ: ಡಿಸೆಂಬರ್ 16 ರಂದು ಮಹಿಳಾ ನ್ಯಾಯ ಸಮಾವೇಶ

Share the Article

ಬೆಳ್ತಂಗಡಿ: ‘ಕೊಂದವರು ಯಾರು’ ಅನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಮಕ್ಕಳ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳನ್ನು ಎಸ್‌ಐಟಿ ವ್ಯಾಪ್ತಿಗೆ ತಂದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲು ಡಿ.16ರಂದು ಬೆಳ್ತಂಗಡಿಯಲ್ಲಿ ‘ಮಹಿಳಾ ನ್ಯಾಯ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ‘ಕೊಂದವರು ಯಾರು’ ಅಭಿಯಾನದ ಸದಸ್ಯೆ ಮಲ್ಲಿಗೆ ಹೇಳಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ನಿರ್ಭಯಾ ಪ್ರಕರಣ ನಡೆದ ದಿನವಾದ ಡಿ.16ಅನ್ನು ಮಹಿಳಾ ಸಂಘಟನೆಗಳು ‘ಅತ್ಯಾಚಾರ ವಿರೋಧಿ ದಿನ’ ವಾಗಿ ಆಚರಿಸುತ್ತಿವೆ. ಅದೇ ದಿನ
ಬೆಳ್ತಂಗಡಿಯಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಮಹಿಳಾ ಸಂಘಟನೆಗಳ ಸದಸ್ಯೆಯರು ಅದರಲ್ಲಿ ಭಾಗವಹಿಸುವರು’ ಎಂದರು.

ತನಿಖಾ ಸಂಸ್ಥೆ ಎಸ್ಐಟಿಗೆ ಒತ್ತಡರಹಿತವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಾಕ್ಷಿದಾರರು, ದೂರು ನೀಡಲು ಹೋಗುವವರಿಗೆ ಬೆದರಿಸುವ ಪ್ರಯತ್ನಗಳು ಆಗದಂತೆ ಎಚ್ಚರವಹಿಸಬೇಕು ಎಂದು ಅಭಿಯಾನದ ಸದಸ್ಯೆ ಜ್ಯೋತಿ ಎ. ಹೇಳಿದರು.

Comments are closed.