ಬೆಕ್ಕು ಮತ್ತು ನಾಯಿ ಪ್ರೀತಿಯ ವಿಡಿಯೋ, ಸಮಾಜ ನಿಮ್ಮ ಪ್ರೀತಿಯನ್ನು ಒಪ್ಪಲ್ಲ ಎಂದ ನೆಟ್ಟಿಗರು!

Share the Article

ಸಾಮಾಜಿಕ ಜಾಲತಾಣಗಳಲ್ಲಿ ಈಗ ಸದ್ದು ಮಾಡುತ್ತಿರುವ ಈ ವಿಡಿಯೋ ಒಂದು ಸಿನಿಮಾದ ಪ್ರೇಮಕಥೆಯಾಗಿದೆ. ಒಂದೇ ವ್ಯತ್ಯಾಸವೆಂದರೆ ಈ ವಿಡಿಯೋದಲ್ಲಿರುವ ನಾಯಕ ಮತ್ತು ನಾಯಕಿ ಮನುಷ್ಯರದ್ದಲ್ಲ, ಬದಲಿಗೆ ನಾಯಿಮರಿ ಮತ್ತು ಪುಟ್ಟ ಬೆಕ್ಕು.

ನಾಯಿಯೊಂದು ತನ್ನ ಪುಟ್ಟ ಸ್ನೇಹಿತ ಬೆಕ್ಕನ್ನು ಪ್ರೀತಿಯಿಂದ ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಇವರೆಡು ಅಪ್ಪಿಕೊಳ್ಳುತ್ತಾ, ಬೆಕ್ಕು , ನಾಯಿಯೊಂದಿಗೆ ತುಂಬಾ ಆರಾಮದಾಯಕವಾಗಿ ಇರುವಂತೆ ಕಾಣುತ್ತದೆ. ನಾಯಿ ಮತ್ತು ಬೆಕ್ಕಿನ ನಡುವಿನ ಈ ಸಣ್ಣ ಸ್ನೇಹವು ಇಂಟರ್ನೆಟ್ ನಲ್ಲಿ ವೈರಲ್‌ ಆಗಿದೆ. ನಿಜ ಜೀವನದಲ್ಲಿ, ನಾಯಿಗಳು ಮತ್ತು ಬೆಕ್ಕುಗಳು ಯಾವಾಗಲೂ ಜಗಳವಾಡುವುದು ಸಹಜ. ಆದರೆ ಇಲ್ಲಿ ಅದರ ತದ್ವಿರುದ್ಧ ಪ್ರೀತಿಯ ಭಾವನೆ ಕಾಣುತ್ತಿದೆ.

ಪ್ರೀತಿ ಜಾತಿ ಅಥವಾ ಜನಾಂಗವನ್ನು ಪರಿಗಣಿಸುವುದಿಲ್ಲ ಎಂಬುದನ್ನು ಈ ವೀಡಿಯೊ ಸಾಬೀತುಪಡಿಸುತ್ತದೆ. ನಿಮಗೆ ಬೇಕಾಗಿರುವುದು ಹೃದಯ ಮಾತ್ರ ಎಂದು ಈ ವೀಡಿಯೋ ಮೂಲಕ ತಿಳಿಯಬಹುದು.

canvastearszz ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ಅನೇಕರು ಇದನ್ನು ಇಷ್ಟಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಒಬ್ಬ ಬಳಕೆದಾರರು “ಸಮಾಜ ನಿಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ” ಎಂದು ಬರೆದಿದ್ದಾರೆ.

https://www.instagram.com/reel/DPEmU4dEtLQ/?utm_source=ig_embed&ig_rid=8e5c4f1b-6931-4cc9-927c-b765bad61205

Comments are closed.