B T Lalita Nayak: ರಾಮ-ಲಕ್ಷ್ಮಣರು ಆದರ್ಶರಲ್ಲ, ಕ್ರೂರಿಗಳು!! ಸಾಹಿತಿ ಬಿ ಟಿ ಲಲಿತಾ ನಾಯಕ್ ಹೇಳಿಕೆ

B T Laita Nayak: ರಾಮಾಯಣ ಮಹಾಕಾವ್ಯದಲ್ಲಿರುವ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣ ಆದರ್ಶ ವ್ಯಕ್ತಿಗಳಲ್ಲ ಕ್ರೂರಿಗಳು ಎಂದು ಬಂಡಾಯ ಸಾಹಿತಿ ಬಿ.ಟಿ ಲಲತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯ ಎ.ವಿ.ಕೆ ಮಹಿಳಾ ಕಾಲೇಜು ಸಭಾಂಗಣದಲ್ಲಿಂದು ನಡೆದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದ ಅವರು ರಾಮಾಯಣ ಮಹಾಕಾವ್ಯದಲ್ಲಿರುವ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣ ಕ್ರೂರಿಗಳು. ಶೂರ್ಪನಖಿಯ ಮೂಗು ಕತ್ತರಿಸಿದ ಲಕ್ಷ್ಮಣ, ಸೀತೆಯ ಮೇಲೆ ಸಂಶಯ ವ್ಯಕ್ತಪಡಿಸಿ ನಿರ್ಜನ ಕಾಡಿಗಟ್ಟಿದ ಶ್ರೀರಾಮ ಆದರ್ಶರಾಗಲು ಸಾಧ್ಯವಿಲ್ಲ. ಸೀತೆಯನ್ನ ಅಪಹರಿಸಿ ಜೀವನ ಹಾಳು ಮಾಡಿದ ರಾವಣ ಕೂಡ ಕ್ರೂರಿಯೇ ಭಕ್ತಿಯ ಹೆಸರಿನಲ್ಲಿ ಆದರ್ಶರಂತೆ ಬಿಂಬಿಸಲಾಗಿದೆ ಎಂದು ಆಕ್ಷೇಪಿಸಿದರು.
ಅಲ್ಲದೆ ದೇಗುಲಗಳು ಜನರನ್ನ ಮೌಢ್ಯತೆಗೆ ತಳ್ಳುತ್ತಿವೆ. ಗ್ರಂಥಾಲಯಗಳು ಜ್ಞಾನಾರ್ಜನೆಯತ್ತ ಕರೆದೊಯ್ಯುತ್ತವೆ. ಮೌಢ್ಯಗಳಿಂದ ಹೊರಬರಲು ಶಿಕ್ಷಣವೇ ಪರಿಹಾರ. ಶಾಂತಿಯ ಪ್ರತೀಕವಾಗಿರುವ ಬುದ್ಧನ ಕೈಯಲ್ಲಿ ಕತ್ತಿ, ಗುರಾಣಿ, ಖಡ್ಗ ಏನೂ ಇಲ್ಲ. ಮಹಾತ್ಮ ಗಾಂಧೀಜಿ ಕೈಯಲ್ಲಿ ಚರಕ ಮಾತ್ರ ಇದೆ. ಇತ್ತೀಚೆಗೆ ಶ್ರೀರಾಮನ ಕೈಗೆ ಬಿಲ್ಲು, ಬಾಣ ನೀಡಲಾಗಿದೆ ಎಂದು ಲಲಿತಾ ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ.
Comments are closed.