T20 World Cup 2026: ನ.25 ರಂದು ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ!

Share the Article

T20 World Cup 2026: ಭಾರತ ಮತ್ತು ಶ್ರೀಲಂಕಾದ ಜಂಟಿ ಆತೀತ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ವೇಳಾಪಟ್ಟಿ ನ.25ರಂದು ಪ್ರಕಟವಾಗಲಿದೆ. ಅಂದು ಸಂಜೆ 6:30ಕ್ಕೆ ಐಸಿಸಿ (ICC) ವೇಳಾಪಟ್ಟಿ ಪ್ರಕಟಿಸಲಿದೆ.

ವಿಶ್ವಕಪ್‌ ಹಿನ್ನೆಲೆ 20 ತಂಡಗಳನ್ನ 4 ಗುಂಪುಗಳಲ್ಲಿ ವರ್ಗೀಕರಿಸಲಾಗಿದ್ದು, ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕ್‌ (Ind vs Pak) ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡ ಏಷ್ಯಾಕಪ್‌ (Asia Cup) ಟೂರ್ನಿಯಲ್ಲೂ ಭಾರತ-ಪಾಕ್‌ ಒಂದೇ ಗುಂಪಿನಲ್ಲಿದ್ದವು, ಹೀಗಾಗಿ ಲೀಗ್‌ ಸುತ್ತು, ಸೂಪರ್‌ ಫೋರ್‌ ಹಾಗೂ ಫೈನಲ್‌ ಸೇರಿ 3 ಬಾರಿ ಮುಖಾಮುಖಿಯಾಗಿದ್ದವು. ಮೂರು ಬಾರಿಯೂ ಪಾಕ್‌ ಸೋಲು ಕಂಡಿತು. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.

ಯಾವ ಗುಂಪಿನಲ್ಲಿ ಯಾವ ತಂಡ?

ʻಎʼ ಗುಂಪು – ಭಾರತ, ಪಾಕಿಸ್ತಾನ, ನೆದರ್ಲೆಂಡ್, ನಮೀಬಿಯಾ, ಯುಎಸ್ಎʻಬಿʼ ಗುಂಪು – ಶ್ರೀಲಂಕಾ, ಆಸ್ಟ್ರೇಲಿಯಾ, ಜಿಂಬಾಬ್ವೆ, ಐರ್ಲೆಂಡ್, ಒಮನ್ʻಸಿʼ ಗುಂಪು – ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ, ಇಟಲಿʻಡಿʼ ಗುಂಪು – ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ, ಕೆನಡಾ.

ನವೆಂಬರ್ 25 ರಂದು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐಸಿಸಿ ಅಧಿಕೃತವಾಗಿ ಬಣಗಳು ಹಾಗೂ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಟೂರ್ನಿ 2024ರ ಆವೃತ್ತಿಯಂತೆಯೇ ನಡೆಯಲಿದೆ. ಪ್ರತಿ ಗ್ರೂಪ್‌ನಿಂದ ಅಗ್ರ ಎರಡು ತಂಡಗಳು ಸೂಪರ್-8ಕ್ಕೆ ಪ್ರವೇಶಿಸಲಿವೆ. ನಂತರ, ಅಗ್ರ 4 ತಂಡಗಳು ಸೆಮಿ-ಫೈನಲ್‌ಗೆ ಮುನ್ನಡೆಯಲಿವೆ.

Comments are closed.