500rs Note: 2026 ಕ್ಕೆ 500 ರೂ ನೋಟ್ ಬ್ಯಾನ್? ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

500rs Note : ಕೇಂದ್ರ ಸರ್ಕಾರವು ತಾನು ಹೊಸದಾಗಿ ಬಿಡುಗಡೆಗೊಳಿಸಿದ್ದ ₹2000 ನೋಟುಗಳನ್ನು ಇತ್ತೀಚಿಗೆ ಮರುಪಡೆದು ಅವುಗಳನ್ನು ಚಲಾವಣೆ ಮಾಡದಂತೆ ತಿಳಿಸಿದೆ. ಇದರ ಬೆನ್ನಲ್ಲೇ ಹೊಸ 500 ರೂಪಾಯಿ ನೋಟುಗಳನ್ನು ಸರ್ಕಾರ ಬ್ಯಾನ್ ಮಾಡಲು ಚಿಂತಿಸಿದೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಹೌದು, 2000 ರೂಪಾಯಿ ನೋಟುಗಳ ಬೆನ್ನಲ್ಲೇ 2026 ರಿಂದ 500 ರೂಪಾಯಿ ನೋಟುಗಳ ಚಲಾವಣೆಯನ್ನು ಸಹ ನಿಲ್ಲಿಸಲಾಗುತ್ತಿದೆ. ಭ್ರಷ್ಟಾಚಾರವನ್ನ ನಿಗ್ರಹಿಸಲು ಮತ್ತು ಡಿಜಿಟಲ್ ವಹಿವಾಟುಗಳನ್ನ ಉತ್ತೇಜಿಸಲು ಮೋದಿ ಸರ್ಕಾರ 500 ರೂಪಾಯಿ ನೋಟುಗಳನ್ನ ರದ್ದುಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಆದರೆ ಆರ್ಬಿಐ ಈ ಕುರಿತಾಗಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಬದಲಿಗೆ ಎಲ್ಲಾ ಬ್ಯಾಂಕ್ಗಳಲ್ಲಿನ ಬಿಳಿ ಲೇಬಲ್ ಎಟಿಎಂ ನಿರ್ವಾಹಕರು ತಮ್ಮ ಎಟಿಎಂಗಳು ನಿಯಮಿತವಾಗಿ 100 ಮತ್ತು 200 ರೂ. ನೋಟುಗಳನ್ನು ವಿತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು, ಇದರಿಂದಾಗಿ ಸಾರ್ವಜನಿಕರಿಗೆ ಆಗಾಗ್ಗೆ ಬಳಸುವ ನೋಟುಗಳು ಹೆಚ್ಚು ಸುಲಭವಾಗಿ ಲಭ್ಯವಾಗುತ್ತವೆ ಎಂದು ತಿಳಿಸಿದೆ.
Comments are closed.