Vegetable Price: ರಾಜ್ಯದ ಜನತೆಗೆ ಬೆಳ್ಳಂಬೆಳಗ್ಗೆ ಶಾಕ್ – ದಿಢೀರ್ ಏರಿಕೆ ಕಂಡ ತರಕಾರಿ ದರ

Vegetable Vrice: ರಾಜ್ಯದ ಜನತೆಗೆ ಶಾಕ್ ಎದುರಾಗಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ಇದೀಗ ಎಲ್ಲಾ ತರಕಾರಿ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಏರಿಕೆ ಕಂಡಿದೆ. ಇದು ಜನಸಾಮಾನ್ಯರಿಗೆ ದೊಡ್ಡ ಹೊರೆಯನ್ನು ಉಂಟು ಮಾಡಿದೆ.

ಹೌದು, ಟೊಮೊಟೊ ಸೇರಿದಂತೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಪಾಲಕ್, ಮೆಂತೆ ಸೊಪ್ಪು 30 ರಿಂದ 40 ರೂ.ಗೆ ಏರಿಕೆಯಾಗಿದೆ. ಆಲೂಗಡ್ಡೆ ಕೆ.ಜಿಗೆ 40 ರೂ., ಹಿರೇಕಾಯಿ ಕೆಜಿಗೆ 80 ರೂ., ಬದನೆಕಾಯಿ 80 ರೂ., ಮೂಲಂಗಿ 60 ರೂ., ಕ್ಯಾರೆಟ್ 60 ರೂ., ಹಸಿ ಮೆಣಸಿನ ಕಾಯಿ, ಟೊಮೆಟೊ ದರ ಕೂಡ ಏರಿಕೆಯಾಗಿದೆ.
ರಾಜ್ಯದಲ್ಲಿ ಹಿಂಗಾರು ಮಳೆಯ ವಿಳಂಬದಿಂದಾಗಿ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
Comments are closed.