Viral Video : ಬರೀ 2 ಸೆಕೆಂಡ್ ವಿಡಿಯೋದಿಂದ 5 ಲಕ್ಷ ಸಂಪಾದಿಸಿದ ಹುಡುಗಿ!! ಅಂತದ್ದೇನಿದೆ ಆ ವಿಡಿಯೋದಲ್ಲಿ?

Viral Video : ಇಂದು ಕಂಟೆಂಟ್ ಕ್ರಿಯೇಟರ್ಗಳು ಅನೇಕ ವಿಡಿಯೋಗಳನ್ನು ಮಾಡುವುದರ ಮುಖಾಂತರ ಸಾಕಷ್ಟು ಪ್ರಾಡಕ್ಟ್ ಗಳ ಕುರಿತು ಪ್ರಮೋಷನ್ ಕೊಟ್ಟು ಸಾವಿರಾರು ರೂಪಾಯಿ ಹಣಗಳನ್ನು ಗಳಿಸುತ್ತಾರೆ. ಈ ರೀತಿ ಹಣ ಗಳಿಸುವಷ್ಟು ಫೇಮಸ್ ಆಗಬೇಕೆಂದರೆ ಸಾಕಷ್ಟು ಸಮಯ ಬೇಕು, ಪರಿಶ್ರಮ ಬೇಕು. ಆದರೆ ಇಲ್ಲೊಬ್ಬಳು ಕಂಟೆಂಟ್ ಕ್ರಿಯೇಟರ್ ಬರಿ 2 ಸೆಕೆಂಡ ವಿಡಿಯೋದಿಂದ ಬರೋಬ್ಬರಿ 5 ಲಕ್ಷ ಸಂಪಾದಿಸಿದ್ದಾಳೆ. ಹಾಗಿದ್ದರೆ ಆ ವಿಡಿಯೋದಲ್ಲಿ ಅಂತದ್ದೇನಿದೆ?

ಹೌದು, ಎಕ್ಸ್ ಖಾತೆಯಲ್ಲಿ ಎರಡು ಸೆಕೆಂಡುಗಳ ಮೇಕಪ್ ಕ್ಲಿಪ್ ವೈರಲ್ ಆದ ನಂತರ ಹುಡುಗಿಯೊಬ್ಬಳು ರಾತ್ರೋರಾತ್ರಿ ಸೆನ್ಸೇಷನ್ ಆಗಿ ಮಾರ್ಪಟ್ಟಿದ್ದಾಳೆ. ಇದು ಹೇಗೆ ಎಂದು ಕೇಳಿದರೆ ಯಾರಿಗೂ ತಿಳಿದಿಲ್ಲ. ನವೆಂಬರ್ 2, 2025 ರಂದು ಆಟೋದಲ್ಲಿ ಕುಳಿತಿರುವ 2 ಸೆಕೆಂಡುಗಳ ವೀಡಿಯೊವನ್ನು ಆಕೆ ಪೋಸ್ಟ್ ಮಾಡಿದರು. ” Makeup ate today” ಎಂಬ ಕ್ಯಾಪ್ಷನ್ ನೀಡಿರುವ ಈ ಪೋಸ್ಟ್ ಇದುವರೆಗೆ ಅಂದರೆ 20 ದಿನಗಳ ನಂತರ 90.39 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಅಷ್ಟೇ ಅಲ್ಲದೆ ಇನ್ನೂ ಈ ವಿಡಿಯೋ ವೈರಲ್ ಆಗುತ್ತಲೇ ಇದೆ. ಜೊತೆಗೆ ಆಕೆಯ ಜೋಬು ಕೂಡ ತುಂಬುತ್ತಲೇ ಇದೆ.
ಅಂದಹಾಗೆ ವೈರಲಾಗುತ್ತಿರುವ ಈ ಕಂಟೆಂಟ್ ಕ್ರಿಯೇಟರ್ ಹೆಸರು ಬಡ್ ವೈಸರ್. ತನ್ನನ್ನು ತಾನು ಪಾರ್ಟಿಗರ್ಲ್ ಎಂದು ಕರೆದುಕೊಳ್ಳುವ ಆಕೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ, ಮತ್ತು ಮೇಕಪ್ ಕ್ಲಿಪ್ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿರುವುದು ಇದೇ ಮೊದಲಲ್ಲ. ಇದರ ವಿಶೇಷತೆ ಏನು? ಯಾರಿಗೂ ತಿಳಿದಿಲ್ಲ. ಆದರೆ ಈ ವೈರಲ್ ಕ್ಲಿಪ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಶುಭ್ ಎಂಬ ಎಕ್ಸ್ ಬಳಕೆದಾರರು ಈ ವಿಡಿಯೋಗೆ ಕಮೆಂಟ್ ಮಾಡಿ “ನನ್ನ ಲೆಕ್ಕಾಚಾರಗಳು ಮತ್ತು ಈ ವೇದಿಕೆಯಲ್ಲಿನ ನನ್ನ ಅನುಭವದ ಆಧಾರದ ಮೇಲೆ, ಈ ಹುಡುಗಿ ಈ ಟ್ವೀಟ್‌ನಿಂದ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆಯುತ್ತಾಳೆ” ಎಂದು ಹೇಳಿದ್ದಾರೆ.
Comments are closed.