Puttur: ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ

Share the Article

Puttur: ಬೆಂಗಳೂರಿನಲ್ಲಿಉದ್ಯೋಗದಲ್ಲಿದ್ದ ಪುರುಷರಕಟ್ಟೆಯ ಇಂದಿರಾನಗರದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತನನ್ನು ಪ್ರತೀಕ್ ಜೋಗಿ (23) ಎಂದು ಗುರುತಿಸಲಾಗಿದೆ.

ಈತ ಬೆಂಗಳೂರಿನ ಶೋ ರೂಮ್ ವರ್ಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ನ. 21 ರಂದು ಮಧ್ಯಾಹ್ನ ಮನೆಯಲ್ಲಿ ಮೊಬೈಲ್‌ ನೋಡುತ್ತಿದ್ದ, ಬಳಿಕ ಕಾಣೆಯಾಗಿದ್ದ.ಅನುಮಾನಗೊಂಡ ಮನೆ ಮಂದಿ ಆತನನ್ನು ಹುಡುಕಾಡಿದ್ದು, ಈ ವೇಳೆ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

Comments are closed.