Car Loan: ಕಾರು ಕೊಳ್ಳಲು ಕಡಿಮೆ ಬಡ್ಡಿಗೆ ಸಿಗ್ತಿದೆ ಬ್ಯಾಂಕ್ ಲೋನ್ – ಜಸ್ಟ್ ರೂ.20,000 ಕಟ್ಟಿ, ಹೊಸ ಕಾರು ಮನೆಗೆ ತನ್ನಿ

Car Loan: ತಮ್ಮದೇ ಸ್ವಂತ ಕಾರು ಇರಬೇಕು ಎಂಬುದು ಪ್ರತಿಯೊಂದು ಕುಟುಂಬದ ಕನಸು. ಆದರೆ ಕಾರುಕೊಳ್ಳುವಷ್ಟು ಹಣವಿಲ್ಲದಿರುವುದು ಹಾಗೂ ಇಂದಿನ ದುಬಾರಿ ಜಗತ್ತಿನಲ್ಲಿ ಆ ಕನಸು ಕೆಲವರ ಪಾಲಿಗೆ ನನಸಾಗಿ ಉಳಿಯುತ್ತದೆ. ಇನ್ನು ಹಲವರು EMI ಮುಖಾಂತರ ಕಾರನ್ನು ಖರೀದಿಸುತ್ತಾರೆ. ಆದರೆ ಈಗ ನೀವು ಕಾರುಕೊಳ್ಳಲು ಕೆಲವು ಬ್ಯಾಂಕ್ಗಳು ಸಾಲ ನೀಡುತ್ತಿವೆ. ಹಾಗಿದ್ದರೆ ಯಾವ ಬ್ಯಾಂಕುಗಳು ಕಾರುಕೊಳ್ಳಲು ಸಾಲ ಕೊಡುತ್ತಿವೆ? ಎಷ್ಟು ಬಡ್ಡಿ ಇರುತ್ತದೆ? ಎಂದು ನೋಡೋಣ.

ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು 5 ವರ್ಷಗಳ ಅವಧಿಯ ಹೊಸ ಕಾರಿಗಾಗಿ 10 ಲಕ್ಷ ರೂ. ಕಾರ್ ಲೋನ್ ನೀಡುತ್ತದೆ. ಈ ಸಾಲಗಳಿಗೆ ಶೇಕಡಾ 7.85% ರಿಂದ ಶೇಕಡಾ 9.99% ರವರೆಗೆ ಬಡ್ಡಿ ವಿಧಿಸುತ್ತವೆ.
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡಾ 9.4% ಬಡ್ಡಿ ವಿಧಿಸಲಾಗುತ್ತದೆ. ಇದರ ಇಎಂಐ 20,953 ರೂಪಾಯಿ ಆಗಿರುತ್ತದೆ. ಇದು ಬ್ಯಾಂಕ್ ಗ್ರಾಹಕರ ಆದಾಯ, ಕ್ರೆಡಿಟ್ ಸ್ಕೋರ್ ಸಂಬಂಧಿಸಿ ಅನ್ವಯವಾಗುತ್ತದೆ
ಐಸಿಐಸಿಐ ಬ್ಯಾಂಕ್: ಐದು ವರ್ಷಗಳ ಅವಧಿಗೆ, 10 ಲಕ್ಷ ಸಾಲಕ್ಕೆ ಶೇಕಡಾ 8.5% ಬಡ್ಡಿ ವಿಧಿಸುತ್ತದೆ. ಇದರ ಇಎಂಐ 20,517 ರೂಪಾಯಿ ಆಗಿರುತ್ತದೆ.
ಕೆನರಾ ಬ್ಯಾಂಕ್: 10 ಲಕ್ಷ ರೂಪಾಯಿ ಹೊಸ ಕಾರಿಗಾಗಿ ಐದು ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡರೆ, ಶೇಕಡಾ 8.20% ಬಡ್ಡಿ ಕಟ್ಟಬೇಕು. ಇದರ ಮಾಸಿಕ ಕಂತು 20,372 ರೂಪಾಯಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಭಾರತದ ಅತಿದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಕಾರ್ ಲೋನ್ ನೀಡುತ್ತದೆ. ಐದು ವರ್ಷಗಳ ಅವಧಿಯ 10 ಲಕ್ಷ ರೂಪಾಯಿ ಸಾಲಕ್ಕೆ ಶೇಕಡಾ 8.75% ಬಡ್ಡಿಯನ್ನು ವಿಧಿಸಲಾಗುತ್ತದೆ. ಇದರ ಮಾಸಿಕ ಕಂತು 20,638 ರೂಪಾಯಿ ಆಗಿರುತ್ತದೆ.
Comments are closed.