ಸಿಎಂ ಸಿದ್ದರಾಮಯ್ಯ ಮನೆಗೆ 6 ತಿಂಗಳಾದರೂ ಇನ್ನೂ ಸಿಗದ ವಿದ್ಯುತ್‌, ಏನಿದು ಸ್ಟೋರಿ?!

Share the Article

ಮೈಸೂರು: ಮುಖ್ಯಮಂತ್ರಿಯ ಮನೆಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ ಅಂದ್ರೆ ನಂಬ್ತೀರಾ? ನಂಬಲೇಬೇಕು, ಹಾಗೆ ಬಂದಿದೆ ಮೈಸೂರಿನಿಂದ ಈ ಸ್ಟೋರಿ. ಮೈಸೂರಿನ ಪ್ರತಿಷ್ಠಿತ ಕುವೆಂಪು ನಗರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸಿಎಂ ಸಿದ್ದರಾಮಯ್ಯನವರ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪರದಾಡುತ್ತಿದ್ದಾರೆ. ಅವರಿಗೆ ವಿದ್ಯುತ್ ಸಂಪರ್ಕ ಕೊಡಲು ಹೊಸ ನಿಯಮ ಅಡ್ಡಿಯಾಗಿದೆ.
ಕುವೆಂಪು ನಗರದಲ್ಲಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿ 80/120 ವಿಸ್ತೀರ್ಣದಲ್ಲಿ 3 ಅಂತಸ್ತಿನ ಮನೆ ನಿರ್ಮಿಸಿದ್ದಾರೆ.

ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಕಡ್ಡಾಯ ಮಾಡಿದೆ. ಇದರ ಪರಿಣಾಮ ಸ್ವಾಧೀನಾನುಭವ ಪ್ರಮಾಣ ಪತ್ರ ಇಲ್ಲದ ಕಾರಣ ಸಿದ್ದರಾಮಯ್ಯ ಅವರ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಸಿಗದಂತಾಗಿದೆ. ಅವರಿಗೆ ವಿದ್ಯುತ್ ಸಂಪರ್ಕ ಪಡೆಯಲು ನ್ಯಾಯಾಲಯ ಸೂಚಿಸಿರುವ ನಕ್ಷೆ ಪಡೆಯಲು ಹೊಸ ನಿಯಮ ಅಡ್ಡಿಯಾಗಿದೆ.

6 ತಿಂಗಳ ಹಿಂದೆಯೇ 94 ಕೆವಿ ವಿದ್ಯುತ್ ಮಂಜೂರಾಗಿದೆ. ಆದರೆ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಕಡ್ಡಾಯ ಮಾಡಿರುವ ಕಾರಣ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ ಎನ್ನುತ್ತಿವೆ ಮೂಲಗಳು. ಈ ಹಿಂದಿನ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಈ ವರ್ಷದ ಏಪ್ರಿಲ್ ನಿಂದಲೇ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ನೀಡಲು ನಕ್ಷೆ ಮಂಜೂರಾತಿ, ಒಸಿಯನ್ನು ಕಡ್ಡಾಯಗೊಳಿಸಲಾಗಿದೆ. ಒ.ಸಿ ಇಲ್ಲದೆ ಇರುವುದರಿಂದ ಸಿದ್ದರಾಮಯ್ಯ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಅಸಹಾಯಕರಾಗಿ ಕುಳಿತಿದ್ದಾರೆ. ರಾತ್ರಿಯಾದರೆ ಸಿದ್ದರಾಮಯ್ಯನವರ 3 ಅಂತಸ್ತಿನ ಭವನದಲ್ಲಿ ಗಾಢ ಕತ್ತಲು ಆವರಿಸುತ್ತದೆ.

Comments are closed.