ಸಂಸ್ಕೃತ ಸತ್ತ ಭಾಷೆ, ಅದಕ್ಕೆ 2400 ಕೋ. ಕೊಟ್ಟಿದ್ದಾರೆ: ಡಿಸಿಎಂ ಉದಯನಿಧಿ ಹೊಸ ವಿವಾದ, ಬಿಜೆಪಿ ಆಕ್ರೋಶ

Share the Article

ಚೆನ್ನೈ: ಸಂಸ್ಕೃತ ಸತ್ತ ಭಾಷೆ ಎಂದು ಹೇಳುವ ಮೂಲಕ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಯಾವುದೇ ನಾಯಕರು ಹೇಳಿಕೆ ನೀಡುವಾಗ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಉದಯನಿಧಿ, ಕೇಂದ್ರ ತಮಿಳು ಭಾಷೆ ಅಭಿವೃದ್ಧಿಗೆ 150 ಕೋಟಿ ರೂ. ನೀಡಿದ್ದಾರೆ. ಅದೇ ಸತ್ತ ಭಾಷೆ ಸಂಸ್ಕೃತಕ್ಕೆ 2,400 ಕೋಟಿ ನೀಡಿದೆ ಸರ್ಕಾರ ಎಂದಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ‘ಯಾವುದೇ ಭಾಷೆ ಸತ್ತಿದೆ ಎನ್ನುವ ಹಕ್ಕು ಯಾರಿಗೂ ಇಲ್ಲ. ಅದರಲ್ಲೂ ಅದರಲ್ಲೂ ದೇಶದೆಲ್ಲೆಡೆ ಪ್ರಾರ್ಥನೆ, ಆಚರಣೆಗಳಲ್ಲಿ ಬಳಕೆಯಾಗುವ ಸಂಸ್ಕೃತದ ಬಗ್ಗೆ ಹೀಗೆ ಹೇಳಲಾಗದು’ ಎಂದಿದ್ದಾರೆ.

ಯಾವುದೇ ಭಾಷೆಯೊಂದನ್ನು ಕೀಳಾಗಿ ತೋರಿಸಿ ಇನ್ನೊಂದು ಭಾಷೆಯನ್ನು ಹೊಗಳುವ ಮನಸ್ಥಿತಿ ತಪ್ಪು. ಜನನಾಯಕರು ಭಾಷೆ, ಸಂಸ್ಕೃತಿ ಬಗ್ಗೆ ಹೇಳಿಕೆಗಳನ್ನು ನೀಡುವಾಗ ಜವಾಬ್ದಾರಿಯಿಂದ ಇರಬೇಕು. ತಮಿಳು ಸಹ ಸಂಸ್ಕೃತದಿಂದ ಹಲವು ಪದಗಳನ್ನು ಎರವಲು ಪಡೆದಿದ್ದು ಅದು ದೌರ್ಬಲ್ಯವಲ್ಲ, ಅದು ಭಾಷೆಯ ತಾಕತ್ತು’ ಎಂದು ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.

Comments are closed.