ರಾಜ್ಯಪಾಲರಿಗೆ ಕಾಲಮಿತಿ: ಸಂವಿಧಾನ ತಿದ್ದುಪಡಿ ಆಗೋವರೆಗೂ ವಿರಮಿಸಲ್ಲ: ಸ್ಟಾಲಿನ್

ಚೆನ್ನೈ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿರುವ ವಿಧೇಯಕಗಳಿಗೆ ಸಹಿ ಹಾಕಲು ರಾಷ್ಟ್ರಪತಿ/ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಮೊನ್ನೆಯಷ್ಟೇ ಸುಪ್ರೀಂಕೋರ್ಟ್ ಕೊಟ್ಟ ತೀರ್ಪಿಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್, ರಾಜ್ಯಪಾಲರು ವಿಧೇಯಕಗಳು ಅಂಗೀಕರಿಸಲು ಕಾಲಮಿತಿ ನಿಗದಿ ಮಾಡಲು ಸಂವಿಧಾನವನ್ನು ತಿದ್ದುಪಡಿ ಮಾಡುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.
ವಿಧೇಯಕಕ್ಕೆ ಅಂಕಿತ ಹಾಕುವ ಸಂಬಂಧ ಈಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿರುವ ಸ್ಟಾಲಿನ್, ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಂವಿಧಾನದ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸಬೇಕು. ಅದನ್ನು ಮೀರಬಾರದು. ವಿಟೋ ಅಧಿಕಾರ ಬಳಸಿ ವಿಧೇಯಕವನ್ನು ವಿಳಂಬ ಮಾಡುವ 4ನೇ ಆಯ್ಕೆ ರಾಜ್ಯಪಾಲರಿಗೆ ಇಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ ಎಂದು ಹೇಳಿದ್ದಾರೆ.

ಸಾಂವಿಧಾನಿಕ ಉನ್ನತ ಹುದ್ದೆಯಲ್ಲಿರುವ ಸಂವಿಧಾನವನ್ನು ಉಲ್ಲಂಘಿಸಿದರೆ, ಅದಕ್ಕೆ ಸಾಂವಿಧಾನಿಕ ಕೋರ್ಟ್ ಗಳು ಮಾತ್ರ ಪರಿಹಾರ ಒದಗಿಸಬಲ್ಲವು. ಪರಿಹಾರಕ್ಕೆ ಎಂದಿಗೂ ಕೋರ್ಟ್ ಗಳು ಬಾಗಿಲು ಮುಚ್ಚಬಾರದು ಎಂದು ಸ್ಟಾಲಿನ್ ಹೇಳಿದ್ದಾರೆ.
Comments are closed.