Bangalore: 8 ವರ್ಷದ ಬಾಲಕಿ ಹೊಟ್ಟೇಲಿ 3 ಕೆಜಿ ಕೂದಲು ಪತ್ತೆ!

Bangalore: ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ ಹೊಟ್ಟೆಯಲ್ಲಿ ಬರೋಬ್ಬರಿ 3 ಕೆ.ಜಿ. ತೂಕದಷ್ಟು ಕೂದಲು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ.ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಜಡೆಯಂತೆ ಗಂಟು ಕಟ್ಟಿಕೊಂಡಿದ್ದ 3 ಕೆ.ಜಿ ಕೂದಲಿನ ಗಡ್ಡೆ ತೆಗೆದಿದ್ದಾರೆ.ಬಹು ಅಪರೂಪದ ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ ಸುಮಾರು 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ.ಅಷ್ಟೂ ವರ್ಷ ಪೋಷಕರಿಗೆ ಈ ಬಗ್ಗೆ ಸಣ್ಣ ಅನುಮಾನವೂ ಬಂದಿಲ್ಲ. ಇತ್ತೀಚೆಗೆ ತೂಕ ಕಡಿಮೆಯಾಗುತ್ತಿತ್ತು. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಹೊಟ್ಟೆ ಭಾಗದಲ್ಲಿ ಗಡ್ಡೆ ರೀತಿಯ ಗುರುತು ಪತ್ತೆಯಾಗಿದ್ದರಿಂದ ಎಚ್ಚೆತ್ತ ಪೋಷಕರು ನೇಟಸ್ ಆಸ್ಪತ್ರೆಗೆ ಕರೆತಂದು ಪರೀಕ್ಷೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ.

Comments are closed.