2025ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದ ಮುಸ್ಲಿಂ ಯುವತಿ ಫಾತಿಮಾ ಬಾಷ್

ನೋಂಥಬುರಿ: 2025 ರ ಮಿಸ್ ಯೂನಿವರ್ಸ್ ಅಂತಿಮ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ವಿಜೇತರಾಗಿದ್ದಾರೆ. ಮಿಸ್ ಥೈಲ್ಯಾಂಡ್ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಮಿಸ್ ವೆನೆಜುವೆಲಾ ಎರಡನೇ ರನ್ನರ್ ಅಪ್ ಆಗಿ ಗಮನಸೆಳೆದರು. ಮಿಸ್ ಫಿಲಿಪೈನ್ಸ್ ಮತ್ತು ಮಿಸ್ ಕೋಟ್ ಡಿ’ಐವರಿ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡರು.

ಮಿಸ್ ಯೂನಿವರ್ಸ್ 2025 ರ ಕೊನೆಯ ಸುತ್ತು ಸಂಜೆಯ ಗೌನ್ ಸುತ್ತಿನಲ್ಲಿ ಅಗ್ರ 12 ಫೈನಲಿಸ್ಟ್ ಗಳೊಂದಿಗೆ ಮುಕ್ತಾಯ ಕಂಡಿತು. ಇದಕ್ಕೂ ಮೊದಲೇ ಮಿಸ್ ಇಂಡಿಯಾ ಯೂನಿವರ್ಸ್ ಮಣಿಕಾ ವಿಶ್ವಕರ್ಮ ಸ್ಪರ್ಧೆಯಿಂದ ನಿರ್ಗಮಿಸಿದರು.
ಟಾಪ್ 12 ರಲ್ಲಿ ಸ್ಥಾನ ಪಡೆದ ದೇಶಗಳಲ್ಲಿ ಗ್ವಾಡೆಲೋಪ್, ಕೊಲಂಬಿಯಾ, ಕ್ಯೂಬಾ, ಮಾಲ್ವಾ, ಕೋಟೆಡ್’ಐವೊಯಿರ್, ಮೆಕ್ಸಿಕೊ, ಪೋರ್ಟೊರಿಕೊ, ಚಿಲಿ, ಥೈಲ್ಯಾಂಡ್, ಫಿಲಿಪೈನ್ಸ್, ಚೀನಾ ಮತ್ತು ವೆನೆಜುವೆಲಾ ಸೇರಿವೆ.
ಇತ್ತೀಚೆಗೆ ಆಕೆ ವಿವಾದ ಒಂದರಲ್ಲಿ ಸಿಲುಕಿದ್ದು, ಪ್ರಾಯೋಜಕರ ಜಾಹೀರಾತು ಪ್ರಚಾರ ಮಾಡದ ಕಾರಣಕ್ಕೆ ಸುದ್ದಿಯಾಗಿದ್ದಳು. ಆದರೆ ಆಕೆ ತನ್ನನ್ನು ತಾನು ಬಲವಾಗಿ ಸಮರ್ಥಿಸಿ ಕೊಂಡಿದ್ದಳು. ಫೈನಲ್ ಸ್ಪರ್ಧೆಗೆ 2 ಇದ್ದಾಗ, ಈ ವಿವಾದದ ಫಲಶ್ರುತಿಯಾಗಿ ಇಬ್ಬರು ಜಡ್ಜ್ ಗಳು ರಾಜೀನಾಮೆ ನೀಡಿ ಹೊರ ನಡೆಯಬೇಕಾಗಿ ಬಂದಿತ್ತು.
Comments are closed.