Silver Price : 2026ಕ್ಕೆ ಎಷ್ಟಾಗುತ್ತೆ ಬೆಳ್ಳಿ ದರ? ಕೇಳಿದ್ರೆ ಶಾಕ್ ಆಗ್ತೀರಾ

Share the Article

Silver Price : ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೆ ಇದೆ. ಇದರ ನಡುವೆ ಬೆಳ್ಳಿಯ ದರವು ಕೂಡ ಸದ್ದಿಲ್ಲದೇ ಏರುತ್ತಿದೆ. ಐವತ್ತು, ಅರವತ್ತು ಸಾವಿರದ ಇದ್ದ ಕೆಜಿ ಚಿನ್ನದ ಬೆಲೆ ಇದೀಗ 1.7 ಲಕ್ಷಕ್ಕೂ ಹೆಚ್ಚು ಗಡಿಯನ್ನು ದಾಟಿದೆ. ತಜ್ಞರು ಇನ್ನೂ ಕೂಡ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಲಿದೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಹಾಗಿದ್ರೆ 2026ಕ್ಕೆ ಬೆಳ್ಳಿ ಬೆಲೆ ಎಷ್ಟಾಗುತ್ತೆ?

ಹೌದು, ಚಿನ್ನದ ಜೊತೆಗೆ ಬೆಳ್ಳಿ ರೇಟು ಕೂಡ ಯಾವತ್ತೂ ಇಲ್ಲದ ಮಟ್ಟಕ್ಕೆ (Unprecedented level) ಏರಿಕೆ ಆಗ್ತಿರೋದು ಜನಸಾಮಾನ್ಯರಿಗೆ ಶಾಕ್ ಕೊಟ್ಟಿದೆ. ಈ ಪರಿಸ್ಥಿತಿಯಲ್ಲಿ, ಮುಂದಿನ ದಿನಗಳಲ್ಲಿ ಬೆಳ್ಳಿ ರೇಟು ಏನಾಗುತ್ತೆ ಅಂತ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ. ಅದೇನು ಅಂತ ನೋಡೋಣ ಬನ್ನಿ.

ಕಳೆದ ಕೆಲವು ವರ್ಷಗಳನ್ನೊಮ್ಮೆ ತಿರುಗಿ ನೋಡಿದ್ರೆ, ಬೆಳ್ಳಿ ರೇಟು ರಾಕೆಟ್ ವೇಗದಲ್ಲಿ ಮೇಲೆ ಹೋಗಿದೆ ಅನ್ನೋದು ಗೊತ್ತಾಗುತ್ತೆ. ಕೆಲವೇ ವರ್ಷಗಳ ಹಿಂದೆ 50-60 ಸಾವಿರ ಇದ್ದ ಕೆಜಿ ಬೆಳ್ಳಿ, ಇವತ್ತು 1.73 ಲಕ್ಷಕ್ಕೆ ಬಂದು ನಿಂತಿದೆ ಅಂದ್ರೆ ನಂಬೋಕೆ ಕಷ್ಟ ಆಗುತ್ತೆ. ತಜ್ಞರು ಹೇಳೋ ಪ್ರಕಾರ, ಇದೇ ರೀತಿ ಬೆಳ್ಳಿಯ ಬೇಡಿಕೆ ಹೆಚ್ಚಾಗ್ತಾನೇ ಇದ್ರೆ, ಮುಂದಿನ ವರ್ಷಗಳಲ್ಲಿ ರೇಟು ಇನ್ನೂ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲವಂತೆ. ಅಲ್ಲದೆ ಕೆ.ಜಿ ಬೆಳ್ಳಿಗೆ 2 ಲಕ್ಷಕ್ಕೂ ಅಧಿಕ ಬೆಲೆಯಾಗಬಹುದು ಎಂದು ಊಹಿಸಲಾಗಿದೆ.

ಹೀಗಾಗಿ ಬೆಳ್ಳಿಗೆ ಬೇಡಿಕೆ ಕಮ್ಮಿ ಆಗೋ ಲಕ್ಷಣ ಕಾಣ್ತಿಲ್ಲ, ಹಾಗಾಗಿ ಬೆಲೆ ಇಳಿಯೋ ಚಾನ್ಸ್ ಕೂಡ ಕಮ್ಮಿನೇ. ಹೂಡಿಕೆ ಮಾಡೋರು ಅಥವಾ ಮದುವೆಗೆ ಒಡವೆ ಮಾಡಿಸೋರು, ರೇಟು ಇಳಿಯುತ್ತೆ ಅಂತ ಕಾಯೋದ್ರಲ್ಲಿ ಅರ್ಥ ಇಲ್ಲ ಅಂತ ಕಾಣ್ತಿದೆ.

Comments are closed.