ರಾಹುಲ್ ಗಾಂಧಿ, ಎಲ್ಲಪ್ಪ ನಿನ್ ಜೀನ್ಸ್ ಪ್ಯಾಂಟ್………?

Share the Article

ಬೆಂಗಳೂರು: ಬಳ್ಳಾರಿಯಲ್ಲಿ “ಜೀನ್ಸ್ ಪಾರ್ಕ್” ಮಾಡುತ್ತೇವೆ, ಬಳ್ಳಾರಿಯನ್ನು “ಜೀನ್ಸ್ ರಾಜಧಾನಿ” ಮಾಡುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ? ಎಂದು ಪ್ರಶ್ನಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯಲ್ಲಿ “ಜೀನ್ಸ್ ಪಾರ್ಕ್” ಮಾಡುತ್ತೇವೆ, ಬಳ್ಳಾರಿಯನ್ನು “ಜೀನ್ಸ್ ರಾಜಧಾನಿ” ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಈಗ ಸರಿಯಾದ ಮೂಲ ಸೌಕರ್ಯವಿಲ್ಲದೆ 36 ಜೀನ್ಸ್ ಘಟಕಗಳು ಮುಚ್ಚುವ ಪರಿಸ್ಥಿತಿ ತಂದಿಟ್ಟಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಬಿಜೆಪಿ ದೂರಿದೆ.

Comments are closed.