Home Breaking Entertainment News Kannada BIGG BOSS: ಬಿಗ್ ಬಾಸ್ : ಪ್ರತಿಸ್ಪರ್ಧಿ ಮೇಲೆ ಹಲ್ಲೆ: ರಿಷಾ ಗೌಡ ವಿರುದ್ಧ ದೂರು...

BIGG BOSS: ಬಿಗ್ ಬಾಸ್ : ಪ್ರತಿಸ್ಪರ್ಧಿ ಮೇಲೆ ಹಲ್ಲೆ: ರಿಷಾ ಗೌಡ ವಿರುದ್ಧ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

BIGG BOSS: ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12 ರ ಸ್ಪರ್ಧಿ ಗಿಲ್ಲಿ ನಟನ (Gilli nata) ಮೇಲೆ ಹಲ್ಲೆ (Assault) ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಸ್ಪರ್ಧಿ ರಿಷಾ ಗೌಡ ವಿರುದ್ಧ ಜಿಲ್ಲಾ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬಿಗ್ ಬಾಸ್ ಕಾರ್ಯಕ್ರಮದ ವೇಳೆ ಕ್ಷುಲಕ ಕಾರಣಕ್ಕೆ ರಿಷಾ ಗೌಡ, ಗಿಲ್ಲಿ ನಟನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಬಗ್ಗೆ ಬಿಗ್ ಬಾಸ್ ಆಯೋಜಕರು ಕೂಡ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಆದರೆ ಇದೀಗ ಈ ಬಗ್ಗೆ ಸಿಟ್ಟಾದ ಗಿಲ್ಲಿ ನಟನ ಅಭಿಮಾನಿಗಳು ರಿಷಾ ವಿರುದ್ಧ ದೂರು ದಾಖಲಿಸಿದ್ದಾರೆ.ಗಿಲ್ಲಿನ ನಟನ ಮೇಲೆ ಹಲ್ಲೆ ನಡೆಸಿದಾಗ ಬಿಗ್ ಬಾಸ್ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ, ಆದರೆ ಆತನ ಅಭಿಮಾನಿಗಳಾದ ನಾವು ಸುಮ್ಮನೆ ಇರುವುದಿಲ್ಲ, ರಿಷಾ ಗೌಡ ವಿರುದ್ಧ ಕ್ರಮ ಜರುಗಿಸುವ ತನಕ ಹೋರಾಟ ಮಾಡುತ್ತೇವೆ ಎಂದು ಹೇಳಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ರಿಷಾ ವಿರುದ್ಧ ದೂರು ದಾಖಸಿದ್ದಾರೆ.