Home Breaking Entertainment News Kannada Bengaluru: ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ಲೀಕ್ ಕೇಸ್ : ವಿಜಯಲಕ್ಷ್ಮಿ ಹೆಸರು ಹೇಳಿದ...

Bengaluru: ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ಲೀಕ್ ಕೇಸ್ : ವಿಜಯಲಕ್ಷ್ಮಿ ಹೆಸರು ಹೇಳಿದ ನಟ ಧನ್ವಿರ್

Hindu neighbor gifts plot of land

Hindu neighbour gifts land to Muslim journalist

Bengaluru: ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ಲೀಕ್ ಕೇಸ್ ಗೆ ಸಂಬಂಧಿಸಿದಂತೆ ವಿಡಿಯೋ ಲೀಕ್ ಮಾಡಿದ ಆರೋಪ ಸದ್ಯ ದರ್ಶನ್ ಆಪ್ತ ನಟ ಧನ್ನೀ‌ರ್ ಮೇಲಿದೆ. ಇದೀಗ ಪ್ರಕರಣದ ವಿಚಾರಣೆ ನಡೆಸುವ ವೇಳೆ ಧನ್ನೀ‌ರ್ ವಿಜಯಲಕ್ಷ್ಮಿ ಹೆಸರು ಹೇಳಿದ್ದಾರೆ. ದರ್ಶನ್ ಆಪ್ತ ಧನ್ನೀ‌ರ್ ಪರಪ್ಪನ ಅಗ್ರಹಾರದ ಕೈದಿಗಳ ವಿಡಿಯೋ ರಿಲೀಸ್ ಮಾಡಿದ್ರಾ ಎಂಬ ಅನುಮಾನದ ಹಿನ್ನೆಲೆ ಪೊಲೀಸರು ಅವರನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಪರಿಶೀಲನೆ ವೇಳೆ ಮೊಬೈಲ್ ನಲ್ಲಿ ಯಾವುದೇ ಸಾಕ್ಷಿ ಸಿಗಲಿಲ್ಲ. ಈ ಹಿನ್ನೆಲೆ ಅವರನ್ನು ಬಿಟ್ಟು ಕಳುಹಿಸಿರುವ ಸಿಸಿಬಿ ಪೊಲೀಸರು ಮತ್ತೆ ವಿಚಾರಣೆ ಅಗತ್ಯ ಇದ್ದರೆ ಮತ್ತೆ ಬರಬೇಕು ಎಂದು ಹೇಳಿದ್ದರು.ನಂತರ 2 ನೇ ಬಾರಿ ಧನ್ನೀ‌ರ್ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದರು. ಈ ವೇಳೆ ಅವರು ಹಲವು ವಿಷಯಗಳನ್ನ ರಿವೀಲ್ ಮಾಡಿದ್ದಾರೆ. ನಾನು ವಿಡಿಯೋ ವೈರಲ್ ಮಾಡಿಲ್ಲ, ನಾನು ವಿಜಯಲಕ್ಷ್ಮಿ ಅವರಿಗೆ ವೀಡಿಯೋ ಫಾರ್ವಡ್‌ ಮಾಡಿದ್ದೆ ಎಂದು ಧನ್ನೀ‌ರ್ ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ವಿಷಯವನ್ನು ಪೊಲೀಸರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷ್ಮಿ ಅವರನ್ನ ಪೊಲೀಸರು ವಿಚಾರಣೆ ಕರೆಸುವ ಸಾಧ್ಯತೆ ಇದೆ.