Druvanth: ಧ್ರುವಂತ್ ಮಂಗಳೂರಿನವನೇ ಅಲ್ಲ!! ಹಾಗಿದ್ರೆ ನಿಜ ಊರು ಯಾವುದು?

Share the Article

Druvanth: ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಮತ್ತು ರಕ್ಷಿತಾ ನಡುವಿನ ಜಟಾಪಟಿ ಕೊಂಚಮಟ್ಟಿಗೆ ಸುಧಾರಿಸಿದ. ಕಳೆದ ವಾರ ವಿಷಕಾರಿ ಆಟವನ್ನು ನೀಡಿದಾಗ ಧ್ರುವಂತ್ ಅವರು ‘ನಾನು ಕೂಡ ಮಂಗಳೂರಿನವನು. ಮಂಗಳೂರಿನಲ್ಲಿ ರಕ್ಷಿತಾ ಶೆಟ್ಟಿ ಹಾಗೆ ಯಾರು ಮಾತನಾಡುವುದಿಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.

ರಕ್ಷಿತಾ ಶೆಟ್ಟಿ ಕುರಿತು ಧ್ರುವಂತ್‌ ಮಾತನಾಡುತ್ತ.. ನಾನೂ ಸಹ ಮಂಗಳೂರಿನವನು.. ಅಲ್ಲಿ ಯಾರೂ ಸಹ ಎಂಥ ಗೊತ್ತುಂಟಾ ಎಂದು ಮಾತನಾಡುವುದಿಲ್ಲ. ಅಲ್ಲದೆ, ರಕ್ಷಿತಾ ತಮಗೆ ಕನ್ನಡ ಬರುವುದೇ ಇಲ್ಲ ಎನ್ನುವ ರೀತಿ ಡ್ರಾಮಾ ಮಾಡ್ತಾಳೆ.. ಮನೆಯಲ್ಲಿ ಸ್ಪಷ್ಟವಾಗಿ ಕನ್ನಡ ಮಾತಾಡ್ತಾಳೆ.. ವೀಕೆಂಡ್‌ ಬಂದ್ರೆ ಕನ್ನಡ ಸ್ವಲ್ಪವೂ ಗೊತ್ತಿಲ್ಲ ಎನ್ನುವ ರೀತಿ ವರ್ತಿಸುತ್ತಾರೆ ಅಂತ ಗಂಭೀರ ಆರೋಪ ಮಾಡಿದ್ದರು. ಆದರೆ ಇದೀಗ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಧ್ರುವಂತ್ ಮಂಗಳೂರಿನವನಲ್ಲ ಎಂಬುದು ತಿಳಿಯುತ್ತದೆ. ಯಾಕೆಂದರೆ ವಿಡಿಯೋದಲ್ಲಿ ಧ್ರುವಂತ್ ತನ್ನ ನಿಜವಾದ ಊರು ಯಾವುದು ಎಂದು ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ಧ್ರುವಂತ್‌.. ಎಲ್ಲರಿಗೂ ನಮಸ್ತೆ.. ನನ್ನ ಹೆಸರು ಧ್ರುವಂತ್‌.. ನಾನು ಸುಮಾರು 10 ವರ್ಷದಿಂದ ಕಿರುತೆರೆಯಲ್ಲಿ ಕಲಾವಿದನಾಗಿ ಕಲಾ ಸೇವೆ ಮಾಡಿಕೊಂಡು ಬಂದಿದ್ದೇನೆ.. ನಾನು ಮೂಲತಃ ಕೊಡಗಿನ ಕೊಡ್ಲಿಪೇಟೆದವನು.. ಒಂದು ಚಿಕ್ಕ ಹಳ್ಳಿಯಿಂದ ಬೆಳೆದು ಬಂದ ಹುಡುಗ ಎಂದು ಹೇಳಿಕೊಂಡಿದ್ದ ವಿಡಿಯೋ ಪ್ರಸ್ತುತ ಸಿಕ್ಕಾಪಟ್ಟೆ ವೈರಲ್‌ ಆಗಿದೆ.. ಇನ್ನು ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಧ್ರುವಂತ್‌ ಮೇಲೆ ಕಿಡಿಕಾರುತ್ತಿದ್ದಾರೆ..

Comments are closed.