ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ, ಟಿಕೆಟ್ ರದ್ದು

Share the Article

ತಿರುಪತಿ: ಬರುವ ಡಿ.30ರಿಂದ ಜ.8ರವರೆಗೆ ನಡೆಯಲಿರುವ ವೈಕುಂಠದ್ವಾರ ದರ್ಶನಕ್ಕಾಗಿ ಸ್ಥಳದಲ್ಲೇ ನೀಡುವ ಟಿಕೆಟ್’ಗಳ ವಿತರಣೆ ರದ್ದುಗೊಳಿಸಿದ್ದು, ಎಲ್ಲಾ ಟಿಕೆಟ್’ಗಳನ್ನೂ ಆನ್ ಲೈನ್’ನಲ್ಲಷ್ಟೇ ವಿತರಿಸಲು ತಿರುಪತಿ ತಿರುಮಲ ದೇವಸ್ಥಾನ ನಿರ್ಧರಿಸಿದೆ. ನ.27ರಿಂದ ಡಿ.1 ರವರೆಗೆ ದರ್ಶನ ಟಿಕೆಟ್ ಗಳನ್ನು ನೋಂದಾಯಿಸಿಕೊಳ್ಳಲು ಟಿಟಿಡಿ ಅವಕಾಶ ನೀಡಿದ್ದು, ಡಿ.2ರಂದು ಇ-ಡಿಪ್ ಮೂಲಕ ಆಯ್ಕೆಯಾದವರಿಗೆ ಟಿಕೆಟ್ ನೀಡಲಾಗುತ್ತದೆ.

ಕಳೆದ ವರ್ಷ ಉತ್ಸವದ ಸಮಯದಲ್ಲಿ ಟಿಕೆಟ್ ಪಡೆಯಲೆಂದು ಭಕ್ತರು ಧಾವಿಸಿದಾಗ, ಕಾಲ್ತುಳಿತ ಉಂಟಾಗಿ 6 ಮಂದಿ ಸಾವಿಗೀಡಾಗಿದ್ದರು. ಅಷ್ಟೇ ಅಲ್ಲ ದೇಶದಾದ್ಯಂತ ಹಲವಾರು ಕಡೆ ಕಾಲ್ ತೊಳಿತ ಸಂಭವಿಸಿ ಅಪಾರ ಸಾವು ನೋವು ಉಂಟಾದ ಹಿನ್ನೆಲೆಯಲ್ಲಿ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.

Comments are closed.