ನಿತೀಶ್ ಸ್ತ್ರೀಯರಿಗೆ ತಲಾ ₹2 ಲಕ್ಷ ನೀಡಿದರೆ ರಾಜಕೀಯ ನಿವೃತ್ತಿ – ಪ್ರಶಾಂತ್ ಕಿಶೋರ್ ಸವಾಲ್

Share the Article

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಎನ್‌ಡಿಎ ಕೂಟ ನ.20 ರಂದು ಹೊಸ ಸರಕಾರ ರಚಿಸಲಿದೆ. ಈ ಮಧ್ಯೆ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದ್ದು, ಸ್ಪೀಕರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿರುವ ಜೆಡಿಯು, ಗೃಹ ಖಾತೆಗಾಗಿ ಪಟ್ಟು ಹಿಡಿದಿದೆ ಎಂದು ಸುದ್ದಿ ಮೂಲಗಳು ಉಲ್ಲೇಖಿಸಿವೆ.

ಮಿತ್ರಪಕ್ಷಗಳ ಬಗ್ಗೆ ಸಚಿವ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆಸಿದ್ದು, ಯಾವುದೇ ಗೊಂದಲಗಳಿಲ್ಲ ಎಂದು ನಾಯಕರು ತಿಳಿಸಿದ್ದಾರೆ. ಸ್ವೀಕ‌ರ್ ಹುದ್ದೆ ಬಿಜೆಪಿ ಪಾಲಾಗಿದೆ. ಗೃಹ ಖಾತೆ ಕೈ ತಪ್ಪೋದು ಖಾತ್ರಿ. ಹಿರಿಯ ನಾಯಕ ಪ್ರೇಮ್ ಕುಮಾರ್ ಸ್ಪೀಕ‌ರ್ ಹುದ್ದೆಗೇರುವ ಸಾಧ್ಯತೆಗಳಿವೆ.

ನಿತೀಶ್ ಸ್ತ್ರೀಯರಿಗೆ ₹2 ಲಕ್ಷ ನೀಡಿದರೆ ರಾಜಕೀಯ ನಿವೃತ್ತಿ ಎಂದು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಸವಾಲ್ ಹಾಕಿದ್ದಾರೆ. ನಿತೀಶ್ ಸರಕಾರವು ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ 1.5 ಕೋಟಿ ಮಹಿಳೆಯರಿಗೆ ತಲಾ 2 ಲಕ್ಷ ರೂ. ನೀಡಿದರೆ ನಾನು ರಾಜಕೀಯ ತೊರೆಯುತ್ತೇನೆ ಎಂದು ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಶಪಥ ಮಾಡಿದ್ದಾರೆ. ಜತೆಗೆ ಮತಗಳ್ಳತನ ದೇಶವಿಡೀ ವ್ಯಾಪಿಸಿದೆ. ಈ ಬಗ್ಗೆ ರಾಷ್ಟ್ರೀಯ ಪಕ್ಷಗಳು ಚರ್ಚಿಸಿ ಸುಪ್ರೀಂ ಕೋರ್ಟ್‌ ಗೆ ಹೋಗಬಹುದು ಎಂದು ಅವರು ಹೇಳಿದ್ದಾರೆ.

Comments are closed.