Feviquick: ಕೈಗೆ ಫೆವಿಕ್ವಿಕ್ ಅಂಟಿಕೊಂಡ್ರೆ ಈ ಟ್ರಿಕ್ಸ್ ಯೂಸ್ ಮಾಡಿ, ಈಸಿಯಾಗಿ ತೆಗೆಯಿರಿ!!

feviquick: ಗಟ್ಟಿಮುಟ್ಟಾದ ವಸ್ತುಗಳು ಒಡೆದು ಹೋದ ಸಂದರ್ಭದಲ್ಲಿ ಅವುಗಳನ್ನು ಅಂಟಿಸಲು ಫೆವಿಕ್ವಿಕ್ ಗಮ್ ಸಹಾಯದಿಂದ ಅಂಟಿಸುತ್ತೇವೆ. ಹೀಗೆ ಅಂಟಿಸುವಾಗ ಒಮ್ಮೊಮ್ಮೆ ಗಮ್ ನಮ್ಮ ಕೈಗೆ ಅಂಟುವುದುಂಟು. ಹೀಗೆ ಕೈಗೆ ಅಂಟಿಕೊಳ್ಳುವ ಫೆವಿಕ್ವಿಕ್ ಗಮ್ ಅನ್ನು ತೆಗೆಯುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್

ನೇಲ್ ಪೇಂಟ್ ರಿಮೂವರ್: ನೇಲ್ ಪೇಂಟ್ ರಿಮೂವರ್ ಅಥವಾ ಥಿನ್ನರ್ ಚರ್ಮದ ಮೇಲೆ ಹಾಕಿ 3-4 ನಿಮಿಷ ಬಿಟ್ಟು ತೊಳೆಯಿರಿ. ಅಂಟು ಮೃದುವಾಗಿ ಸ್ವತಃ ಹೊರಬಂದಂತೆ ಬೀಳುತ್ತದೆ.
ನಿಂಬೆರಸ: ನಿಂಬೆರಸದಲ್ಲಿರುವ ಆಮ್ಲ ಅಂಟನ್ನು ಕರಗಿಸುತ್ತದೆ. ಫೆವಿಕ್ವಿಕ್ ಇರುವ ಸ್ಥಳಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ಬ್ರಷ್ ಅಥವಾ ಬಟ್ಟೆ ಬಳಸಿ ತೆಗೆಯಿರಿ.
ಉಗುರುಬೆಚ್ಚಗಿನ ನೀರು + ಸೋಪ್: ಬೆರಳುಗಳನ್ನು ಬೆಚ್ಚಗಿನ ಸಾಬೂನು ನೀರಿನಲ್ಲಿ ಕೆಲವು ನಿಮಿಷ ನೆನೆಸಿದರೆ ಅಂಟು ಸಡಿಲವಾಗುತ್ತದೆ. ಬ್ರಷ್ ಬಳಸಿಕೊಂಡು ಸ್ಕ್ರಬ್ ಮಾಡಿದರೆ ಇನ್ನೂ ಬೇಗ ತೆಗೆಯಬಹುದು.
ಉಪ್ಪಿನ ಬಳಕೆ: ಫೆವಿಕ್ವಿಕ್ ಅಂಟಿರುವ ಭಾಗಕ್ಕೆ ಸ್ವಲ್ಪ ಉಪ್ಪನ್ನು ಸವರಿ. ಹೆಚ್ಚು ಪರಿಣಾಮಕಾರಿ ಆಗಬೇಕೆಂದರೆ ವಿನೇಗರ್ ಜೊತೆಗೆ ಮಿಶ್ರಣ ಮಾಡಿ ಬ್ರಷ್‌ನಿಂದ ಹಚ್ಚಿ. ಕೆಲವೇ ಕ್ಷಣಗಳಲ್ಲಿ ಅಂಟು ಸಡಿಲವಾಗುತ್ತದೆ.
Comments are closed.