ATM ಗೆ ಹೋದಾಗ ಸುರಕ್ಷತೆಗೆ ‘Cancel ಬಟನ್’ ಒತ್ತಿ ಎಂಬ ಮೆಸೇಜ್ ಬಂದಿದೆಯಾ? ಹಾಗಿದ್ರೆ ತಪ್ಪದೆ ಸ್ಟೋರಿ ಈ ನೋಡಿ

Share the Article

ATM: ಕೆಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಾಗೂ ವಾಟ್ಸಾಪ್ ಮೆಸ್ಸೆಂಜರ್ ಗೆ ನೀವು ಎಟಿಎಂ ಗೆ ಹೋದ ತಕ್ಷಣ ಕಾರ್ಡ್ ಅನ್ನು ಹಾಕಿ ಎರಡು ಬಾರಿ ಕ್ಯಾನ್ಸಲ್ ಬಟನ್ ಒತ್ತಿ. ಇದರಿಂದ ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ ಎಂಬ ಮೆಸೇಜ್ ಅನ್ನು ನೀವು ಗಮನಿಸಿರಬಹುದು. ಹೆಚ್ಚಿನವರಿಗೆ ಈ ಮೆಸೇಜ್ ಬಂದಿದೆ. ಒಂದು ವೇಳೆ ಈ ವಿಚಾರ ಏನಾದರೂ ನಿಮ್ಮ ಗಮನಕ್ಕೆ ಬಂದಿದ್ದರೆ ಮಿಸ್ ಮಾಡದೆ ಈ ಸ್ಟೋರಿ ಓದಿ.

ಹೌದು, ನೀವು ಎಟಿಎಂಗೆ ಹೋಗಿ ಕಾರ್ಡ್ ಹಾಕಿ, ಪಿನ್ ನಂಬರ್ ಎಂಟರ್ ಮಾಡೋಕು ಮುಂಚೆ, ಅಲ್ಲಿರೋ Cancel ಬಟನ್‌ ಅನ್ನು ಎರಡು ಸಲ ಪ್ರೆಸ್ ಮಾಡಬೇಕು. ಒಂದು ವೇಳೆ ನೀವು ಈ ತರ ಮಾಡಿದರೆ ಕಳ್ಳರು ಏನಾದ್ರೂ ನಿಮ್ಮ ಪಿನ್ ಕದಿಯೋಕೆ ಸ್ಕಿಮ್ಮಿಂಗ್ ಮಷಿನ್ ಇಟ್ಟಿದ್ರೆ, ಅದು ಕೆಲಸ ಮಾಡಲ್ಲ, ಅಲ್ಲದೇ ಇದರಿಂದ ನೀವು ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಸಲಿಗೆ ಇದು ಸುಳ್ಳು.. ಎಟಿಎಂ ನಲ್ಲಿ ಹಣ ತೆಗೆಯುವಾಗ ಅಥವಾ ಹಣ ಎಷ್ಟಿದೆ ಎಂದು ಚೆಕ್ ಮಾಡುವ ಮುನ್ನ cancel ಎಂಬ ಬಟನ್ ಅನ್ನು ಎರಡು ಬಾರಿಯಲ್ಲ ಬದಲಿಗೆ 10 ಬಾರಿ ಒತ್ತಿದರೂ ಕೂಡ ಯಾವುದೇ ಪ್ರಯೋಜನವಿಲ್ಲ.. ಈ ಬಗ್ಗೆ ಸ್ವತಃ ಆರ್ ಬಿಐ ನೇ ಸ್ಪಷ್ಟಪಡಿಸಿದೆ. ಅಲ್ಲದೇ ಸರ್ಕಾರದ ಸತ್ಯಶೋಧನಾ ವಿಭಾಗ ಕೂಡ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಇದೆಲ್ಲಾ ಸುಳ್ಳು, ಇಂತಹ ಮೆಸೇಜ್ ನಂಬಬೇಡಿ ಎಂದು ಪೋಸ್ಟ್‌ ಮಾಡಿಕೊಂಡಿದೆ.

Comments are closed.